ಜಾನಕಿ ವಿತ್ ಲವ್

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 560

₹ 550.00




Published by: ಸಪ್ನ ಪ್ರಕಾಶನ

Synopsys

ಲೇಖಕ, ಹಿರಿಯ ಪತ್ರಕರ್ತ ಜೋಗಿ ಅವರ ಕೃತಿ ಜಾನಕಿ ವಿತ್ ಲವ್. ಕವಿ ಜಯಂತ ಕಾಯ್ಕಿಣಿ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಟಿಎನ್ ಸೀತಾರಾಮ್ ಬೆನ್ನುಡಿಯ ಮಾತುಗಳಲ್ಲಿ ಸಾಹಿತ್ಯ, ಸಿನಿಮಾ, ಮನುಷ್ಯನಸಣ್ಣತನ, ಪ್ರಕೃತಿ, ಬಾಲ್ಯ,ನಿಗೂಢತೆ, ಸುತ್ತಣದ ಜಗತ್ತು ಎಲ್ಲದರ ಬಗ್ಗೆ ನನ್ನ ಅರಿವನ್ನು ವಿಸ್ತರಿಸುತ್ತಾ ಹೋದ ಜಾನಕಿ ಕಾಲಂ ನನ್ನ ಬದುಕಿನಲ್ಲಿ ಮರೆಯಲಾಗದ ಬರಹಗಳ ಗುಚ್ಚ ಎಂದಿದ್ದಾರೆ. ಕವಿ ಬಿ.ಆರ್ ಲಕ್ಷ್ಮಣರಾವ್, ಸಾಹಿತ್ಯ ವಿಮರ್ಶೆ ಎಂಬ ಹಣ್ಣಿನ ಮರ ಗೊಡ್ಡಾದ ಕಾಲದಲ್ಲಿ ತನ್ನ ಕಾಲಂ ಮೂಲಕ ಅದಕ್ಕೆ ಪ್ರೀತಿಯಿಂದ ಉಗಿದು, ಒದ್ದು, ‘ದೋಹದ’ ಕ್ರಿಯೆ ಮಾಡಿ, ಕಾಯಕಲ್ಪ ನೀಡಿದವಳು ಜಾನಕಿ ಎಮದಿದ್ದಾರೆ. ಕಥೆಗಾರ ವಸುಧೇಂದ್ರ ಅವರು, ಸಾಹಿತ್ಯ ವಿಮರ್ಶೆ ಮತ್ತು ವೈಚಾರಿಕ ಲೇಖನಗಳಲ್ಲೂ ಕಥನಕುತೂಹಲ ಇರಬಹುದು ಎಂದು ನಿರೂಪಿಸಿದ ಬರವಣಿಗೆಗಳು ಎಂದಿದ್ದಾರೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books