`ರೀ START’ ವಾಗೀಶ ಕಟ್ಟಿ ಅವರ ಕೃತಿಯಾಗಿದೆ. ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಲಾಗಿದೆ. ಸೋತು ಗೆದ್ದವರ ಕತೆಗಳು ನಮ್ಮನ್ನು ಯಾವತ್ತೂ ರೋಮಾಂಚನಗೊಳಿಸುತ್ತದೆ. ಅನುಮಾನ, ಅವಮಾನ, ಅಡೆತಡೆ, ಆಲಸ್ಯ, ಮೋಸ, ನೋವು, ತಪ್ಪು, ಹಣೆಬರಹ, ಕಠಿಣ ಸಮಸ್ಯೆಗಳು, ಭಯ ಎಲ್ಲವನ್ನೂ ಬದಿಗಿಟ್ಟು ಛಲದಿಂದ RE-START ಮಾಡಿಕೊಳ್ಳುತ್ತಾ ಗೆಲ್ಲಲು ಹೊರಟವರ ಯಶಸ್ಸಿನ ಸೀಕ್ರೆಟ್ ಇದರಲ್ಲಿವೆ. ಸೋತವರಿಗೆ ಸಾಂತ್ವನ ನೀಡಿ, ಅವಮಾನ ಪಟ್ಟವರಿಗೆ, ಸೋಲು ಕಂಡವರಿಗೆ, ನೋವು ಉಂಡವರಿಗೆ, ಪ್ರೀತಿ ಬಿತ್ತಿ, ಜ್ಞಾನ ಬೆಳೆಸಿ ಶಕ್ತಿ ತುಂಬುವ, ವಿಜಯಶಾಲಿಗಳಾಗಲು ಮುನ್ನುಗ್ಗುವವರಿಗೆ ಗುರಿ ತೋರಿಸುವ ಒಂದು ಪ್ರಯತ್ನವಿದೆ.
ಲೇಖಕ, ನಟ ವಾಗೀಶ ರಘೋತ್ತಮ ಕಟ್ಟಿ ಅವರು ರಂಗಕರ್ಮಿಯೂ ಹೌದು. ಅಮೆರಿಕದಲ್ಲಿ ಎಂಟು ವರ್ಷಗಳ ಕಾಲ ವಾಸವಿದ್ದರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ವಿಶ್ವವಾಣಿ ಮತ್ತು ಕನ್ನಡ ಮಾಣಿಕ್ಯ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಈವರೆಗೂ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಕ್ಕಳಿಗಾಗಿ ನಾಟಕಗಳನ್ನು ಬರೆದಿದ್ದು ಸಾಕಷ್ಟು ಬೀದಿ ನಾಟಕಗಳನ್ನು ಆಡಿಸಿದ್ದಾರೆ. ಕೃತಿಗಳು: ರೀ ಸ್ಟಾಟ್ ...
READ MORE