ಶಶಿಧರ ವಿಶ್ವಾಮಿತ್ರ ಅವರ ಕೃತಿ ಸರಳ ಆರೋಗ್ಯ ವಿಜ್ಞಾನ. ನಾವೀಗ ಆರೋಗ್ಯವಂತರಾಗಿರಬಹುದು. ಆದರೆ ಒಂದಲ್ಲ ಒಂದು ಕಾಲದಲ್ಲಿ ನಮಗೂ ಕಾಯಿಲೆ ಕಸಾಲೆ ತಪ್ಪಿದ್ದಲ್ಲ. ಅಂಥ ಸಂದರ್ಭಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ಸ್ಥೂಲವಾಗಿಯಾದರೂ ತಿಳಿದಿರುವುದೊಳ್ಳೆಯದು. ಹಿರಿಯ ಲೇಖಕರೂ ವಿಜ್ಞಾನಿಯೂ ಆಗಿರುವ ಶಶಿಧರ ವಿಶ್ವಾಮಿತ್ರರ ಈ ಪುಸ್ತಕ ಜನ ಸಾಮಾನ್ಯರ ಒಂದು ಕೈಪಿಡಿಯಿದ್ದಂತೆ. ಆಹಾರ, ಶರೀರ ನೈರ್ಮಲ್ಯ, ಹೃದ್ಯಯ, ಶ್ವಾಸಕೋಶ, ಕಿವಿ, ರಕ್ತಪರಿಚಲನೆ, ಪಚನಕ್ರಿಯೆ, ಸಂತಾನೋತ್ಪತ್ತಿ, ಹೀಗೆ ವಿವಿಧ ವಿಷಯಗಳನ್ನು ತೀರ ಸರಳವಾಗಿ ಮನಮುಟ್ಟುವಂತೆ ವಿವರಿಸುವ ಈ ಸಚಿತ್ರ ಕೃತಿ ಸಂಗ್ರಹಯೋಗ್ಯ.
ಶಶಿಧರ ವಿಶ್ವಾಮಿತ್ರ ಅವರು ಬರಹಗಾರರು ಕೃತಿಗಳು: ಖಿಲ, ವಿಜ್ಞಾನಿಗಳ ಬೆಳಕು, ಬಯಲು (ಅನುವಾದ), ಸರಳ ಆರೋಗ್ಯ ವಿಜ್ಞಾನ, ಸಂಚಿ (ಆತ್ಮಕಥೆ), ಹಿಂದೂ ಧರ್ಮ ಭಾರತೀಯ ಪರಂಪರೆಯ ಬೆಳಕು, ಪದ ಕುಸಿಯೇ ನೆಲವಿಹುದು, ಸೃಷ್ಟಿಯ ರಂಗವಲ್ಲಿ. ...
READ MORE