‘ದುಡಿವ ಹಾದಿಯಲಿ ಜೊತೆಯಾಗಿ’ ಖ್ಯಾತ ಕತೆಗಾರ್ತಿ ನೇಮಿಚಂದ್ರ ಅವರ ಕೃತಿ. ಗಂಡ-ಹೆಂಡತಿ ಇಬ್ಬರೂ ಕೈತುಂಬ ಸಂಬಳ ಬರುವ ಒಳ್ಳೆಯ ಹುದ್ದೆಯಲ್ಲಿ ಇರುವವರದು ಒಂದೋ ಎರಡೋ ಮಕ್ಕಳ ಪುಟ್ಟ ಸಂಸಾರ. ಈ ಸಂದರ್ಭದಲ್ಲಿ ಹೆಂಡತಿ ತನ್ನ ಸ್ವಂತ ಸಾಮರ್ಥ್ಯದಿಂದ ಉದ್ಯೋಗದಲ್ಲಿ ಬಡ್ತಿ ಪಡೆದು, ಗಂಡನಿಗಿಂತ ಹೆಚ್ಚು ಸಂಬಳ ತರತೊಡಗಿದಾಗ, ಹೆಂಡತಿ ಇತರರ ದೃಷ್ಟಿಯಲ್ಲಿ ಹೆಚ್ಚು ಗೌರವಕ್ಕೆ ಪಾತ್ರಳಾಗುತ್ತಿದ್ದಾಳೆ ಎನ್ನಿಸಿದಾಗ, ಗಂಡನಲ್ಲಿ ಅಸೂಯೆ ಪ್ರಾರಂಭವಾಗುತ್ತದೆ. ಅದು ಕ್ರಮೇಣ ಕೀಳರಿಮೆಯ ರೂಪುತಾಳಿ ಸಂಸಾರದ ಬಿರುಕಿಗೆ ಕಾರಣವಾಗುತ್ತದೆ. ಆದರೆ ಪರಸ್ಪರ ಅರಿತು ನಡೆಯುವ ಗಂಡ ಹೆಂಡತಿಯರಾದಾಗ ಸಂಸಾರದ ಗಾಡಿ ಸುಗಮವಾಗಿ ನಡೆಯುತ್ತದೆ. ಗಂಡನ ಏಳಿಗೆಯನ್ನು ಬಯಸಿ, ಮನೆ ನಿಭಾಯಿಸಲು ಉಳಿಯುವ ಹೆಂಡತಿ, ಜೊತೆಗೆ ಹೆಂಡತಿಯ ಏಳಿಗೆಗಾಗಿ ಸಣ್ಣಪುಟ್ಟ ಸಂತೋಷಗಳನ್ನು ತ್ಯಾಗಮಾಡುವ ಗಂಡ – ಇರುವ ಸಂಸಾರ ಅರ್ಥಪೂರ್ಣವಾಗುತ್ತದೆ. - ದುಡಿಯುವ ಹಾದಿಯಲಿ ಜೊತೆಯಾಗಿ ಸಾಗಿ ಸಾರ್ಥಕತೆಯನ್ನು ಕಂಡ ಹಲವು ದಂಪತಿಗಳ ವ್ಯಕ್ತಿ ಚಿತ್ರಣ ಇಲ್ಲಿದೆ. ದುಡಿಯುವ ದಂಪತಿಗಳಿಗಾಗಿ ಇದನ್ನು ರಚಿಸಿರುವ ನೇಮಿಚಂದ್ರ , ತಮ್ಮ ಬದುಕಿನ ಉದಾಹರಣೆಯೊಂದಿಗೆ, ಪರಿಚಿತ ದಂಪತಿಗಳ ಬದುಕನ್ನು ಸಮೀಪದಿಂದ ಚಿತ್ರಿಸಿದ್ದಾರೆ.
ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...
READ MORE