ಗಮನ ಕೃತಿಯು ಡಿ.ಎಸ್, ನಾಗಭೂ಼ಷಣ ಅವರ ಲೇಖನಗಳ ಸಂಗ್ರಹವಾಗಿದೆ. ಇದು ನನ್ನ ಮೊದಲ ಸ್ವತಂತ್ರ ಪುಸ್ತಕ, ಈ ಹಿಂದೆ ಸಂಪಾದನೆ ಹಾಗೂ ಅನುವಾದಗಳ ಒಂದೆರಡು ಪುಸ್ತಕಗಳನ್ನು ಪ್ರಕಟಿಸಿದ್ದೆನಾದರೂ ಕಳೆದ ಹದಿನೈದು ವರ್ಷಗಳಲ್ಲಿ ನಾನು ಸ್ವತಂತ್ರವಾಗಿ ಚಿಂತಿಸಿ, ವಿಶ್ಲೇಷಿಸಿ, ಧ್ಯಾನಿಸಿ ಬರೆದುದನ್ನು ಒಂದು ಸಂಕಲನವಾಗಿ ಪ್ರಕಟಿಸುವ ಧೈರ್ಯ ನನಗೆ ಒದಗಿರಲಿಲ್ಲ. ಈಗಲೂ, ಈ ಪುಸ್ತಕದ ಹಿಂದಿರುವ ಧೈರ್ಯದಲ್ಲಿ ಅರ್ಧ ಮಾತ್ರ ನನ್ನದು; ಇನ್ನರ್ಧ ಈ ಪುಸ್ತಕ ಪ್ರಕಟವಾಗುವ ಪರಿಸ್ಥಿತಿಯನ್ನುಂಟುಮಾಡಿದ ನನ್ನ 'ಸಂವಾದ' ಗೆಳೆಯರದ್ದು ಹಾಗೂ ನನ್ನ ಪತ್ನಿಯದ್ದು. ಅದೇನೇ ಇರಲಿ, ಈ ಪುಸ್ತಕದಲ್ಲಿರುವುದೆಲ್ಲಕ್ಕೂ ನಾನು ಬಾಧ್ಯನಾಗಿದ್ದೇನೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಎಂದು ಲೇಖಕರ ಮಾತಲ್ಲಿ ಡಿ.ಎಸ್.ನಾಗಭೂಷಣ ಅವರು ಹೇಳಿದ್ದಾರೆ. .
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE