ಭಾರತ ಕಂಡ ಶ್ರೇಷ್ಠ ರಾಷ್ಟ್ರಪತಿ ಅಬ್ದುಲ್ ಕಲಾಂ. ರಾಷ್ಟ್ರಕೆಲಸದ ಕಾರಣ ಅಬ್ದುಲ್ ಕಲಾಂ ಅವರು ವಿದೇಶ ಪ್ರವಾಸ ಕೈಗೊಂಡಾಗ ವರದಿ ಮಾಡಲು ಪತ್ರಕರ್ತ ವಿಶ್ವೇಶ್ವರ ಭಟ್ಟರು ಹೋಗಿದ್ದರು. ಅಂದು ನಡೆದ ವಿದ್ಯಮಾನ, ಅವರೊಂದಿಗಿನ ಒಡನಾಟ, ಅಬ್ದುಲ್ ಕಲಾಂ ಅವರ ಮೇರು ವ್ಯಕ್ತಿತ್ವವನ್ನು ತೆರೆದಿಡುವ ಕೃತಿ `ರಾಷ್ಟ್ರಪತಿ ಜತೆ ಹದಿನಾಲ್ಕು ದಿನ'.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE