ನಮ್ಮಲೇ ಮೊದಲು ರವಿ ಮಡೋಡಿ ಅವರ ಪ್ರಬಂದಗಳ ಕೃತಿಯಾಗಿದೆ. ವೃತ್ತಿಯಲ್ಲಿ ಸಾಫ್ಟ್ ವೇರ್ ತಂತ್ರಜ್ಞರಾಗಿರುವ ಮಡೋಡಿಯವರ ಪ್ರಬಂದಗಳನ್ನು ಓದಿದಾಗ ಮೊದಲು ಗಮನ ಸೆಳೆದದ್ದು. ಅವರು ಬಳಸಿದ, ಸುಲಲಿತವಾದ ಭಾಷೆ, ಸರಳ ವಾಕ್ಯಗಳಲ್ಲ. ಸುಲಭವಾಗಿ ಓದಿಸಿಕೊಂಡು ಹೋಗುವ ಗದ್ಯವನ್ನು ರಚಿಸುವಲ್ಲಿ ಮಡೋಡಿಯವರು ಪಳಗಿದ್ದಾರೆ. ನಿನ್ನ ವಿಷಯಗಳನ್ನು ಒಳಗೊಂಡ ಇಲ್ಲಿನ ಪ್ರಬಂದಗಳನ್ನು ಓದುವುದು ಒಂದು ವಿಶಿಷ್ಟ ಅನುಭವ ನಿತ್ಯ ದಿನಚರಿಯಲ್ಲಿ ನಾವು ಗಮನಿಸುವ, ಎದುರಿಸುವ ಹಬ್ಬವೇಶಗಳನ್ನೇ ಮಡಿಯವರು ಸುಲತ ಪ್ರಬಂಧದ ರೀತಿಯಲ್ಲಿ ಬೆಳೆಸಿಕೊಂಡು ಹೋಗಿರುವ ರೀತಿ ಗಮನ ಸೆಳೆಯುತ್ತದೆ. ಇಲ್ಲಿನ ಬರಹಗಳಲ್ಲಿ ಹಾಸುಹೊಲ್ದಾಗಿರುವ ಹಾಸ್ಯದ ಎಳೆಗಳು ನಮ್ಮ ಓದನ್ನು ಇನ್ನಷ್ಟು ನಬರುಗೊಸುತ್ತದೆ. ಓದಿ ಮುಗಿಸಿದಾಗ, ಮನಸ್ಸು ಪ್ರಫುಲ್ಲವಾಗುವಂತೆ ಮಾಡುತ್ತವೆ. ಎಂದು ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಲೇಖಕ ರವಿ ಮಡೋಡಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಎಂಜಿನಿಯರ್ . ಪ್ರವೃತ್ತಿಯಿಂದ ಯಕ್ಷಗಾನ ಪ್ರೇಮಿ. ಯಕ್ಷಗಾನ ನೃತ್ಯ, ಅರ್ಥಗಾರಿಕೆ ಬಲ್ಲವರು. ಮೊಬೈಲ್ ಆಪ್ ಮೂಲಕ ಯಕ್ಷಗಾನ ಪ್ರಸಂಗಗಳನ್ನ ಡಿಜಿಟಲೀಕರಣ ಮಾಡುವುದು ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಕೃತಿಗಳು : ಮಲೆನಾಡಿನ ಯಕ್ಷ ಚೇತನಗಳು (ವ್ಯಕ್ತಿಚಿತ್ರಣಗಳು) ...
READ MORE