`ಕನ್ನಡ ಬಾಲಬೋಧೆ’ ಚ. ವಾಸುದೇವಯ್ಯ ಅವರ ಕನ್ನಡ ವ್ಯಾಕರಣ, ಕನ್ನಡ ಸಾಹಿತ್ಯ, ಮಕ್ಕಳ ಸಾಹಿತ್ಯ ಕುರಿತಾದ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಈ ಪುಸ್ತಕದ ಪ್ರಕಾರ ಅಕ್ಷರಗಳನ್ನು ಕಲಿಸಬೇಕಾದ ಕ್ರಮ ಹೇಗೆಂದರೆ ಉಪಾಧ್ಯಾಯರು ಮಕ್ಕಳನ್ನು ಕುರಿತು, “ನೀವು ಆಟ ಆಟವೆಂದು ಸಾರಿ ಸಾರಿಗೂ ಹೇಳುತ್ತಲೇ ಇರುತ್ತೀರಪ್ಪ, ಅದನ್ನು ಬರೆಯುವ ಬಗೆಯನ್ನು ತೋರಿಸುತ್ತೇನೆ ನೋಡಿ' ಎಂದುಪಕ್ರಮಿಸಿ, ೧ನೆಯ ಪಾಠದಲ್ಲಿರುವಂತೆ ಆಕಾರ ಟಕಾರಗಳನ್ನು ಕಪ್ಪುಹಲಗೆಯ ಮೇಲೆ ಬರೆದು ಈ ಗುರುತಿಗೆ "ಆ" ಎಂದು ಹೆಸರು, ಈ ಗುರುತಿಗೆ 'ಟ' ಎಂದು ಹೆಸರೆಂದು ಆಯಾ ಅಕ್ಷರಗಳನ್ನು ತೋರಿಸಿ ಹೇಳ ಬೇಕು. ಆಮೇಲೆ ಒಂದೊಂದು ಅಕ್ಷರವನ್ನೇ ತೋರಿಸಿ ಅದರ ಹೆಸರನ್ನು ಕೇಳಬೇಕು, ಅಕ್ಷರದ ಹೆಸರನ್ನು ಹೇಳಿ ಅದನ್ನು ತೋರಿಸಿ' ಎಂದು ಕೇಳಬೇಕು. ಹೀಗೆ ಕೆಲವು ಸಾರಿ ಮಾಡಿದರೆ, ಹುಡುಗರಿಗೆ ಅಕ್ಷರವನ್ನು ಗುರುತು ಹಿಡಿಯು ವುದಕ್ಕೆ ಬರುವುದು. ಈಗ ಅಕ್ಷರಗಳೆರಡನ್ನೂ ಕ್ರಮವಾಗಿ ಒಂದರ ಹತ್ತಿರ ಒಂದನ್ನು ಬರೆದು, ಅದನ್ನು ಓದಿ' ಎಂದು ಹೇಳಬೇಕು. ಅವರು ತಡವರಿಸಿ ಕೊಂಡು ಓದುವ ಪಕ್ಷಕ್ಕೆ, ಉಪಾಧ್ಯಾಯರು ಅದನ್ನು ಸರಿಯಾಗಿ ಓದಿ ಹೇಳ ಬೇಕು. ಆ ಮೇಲೆ ಪುಸ್ತಕವನ್ನು ತೆಗೆಯಿಸಿ, ಅದರಲ್ಲಿ ಆಕಾರ ಟಿಕಾರಗಳನ್ನು ತೋರಿಸಿ ಎಂದು ಕೇಳಬೇಕು. ಹುಡುಗರು ಅಕ್ಷರಗಳನ್ನು ತೋರಿಸಿದ ಬಳಿಕ, ಅವುಗಳ ಕೆಳಗೆ ಕೊಟ್ಟಿರುವ ಮಾತುಗಳನ್ನು ಅವರಿಂದಲೇ ಓದಿಸಿ, ತಪ್ಪಿದ ಕಡೆ ತಪ್ಪಿ ಆ ಮಾತುಗಳ ಸರಿಯಾದ ಉಚ್ಚಾರಣೆಯನ್ನು ಕಲಿಸಬೇಕು. ಹೀಗೆಲ್ಲ ಮಾಡುವುದರಿಂದ ಹುಡುಗರಿಗೆ ಅಕ್ಷರಗಳನ್ನು ಗುರುತುಹಿಡಿಯುವುದಕ್ಕೆ ಮಾತ್ರ ಬಂದಂತಾಗುವುದು.
ಸಾಹಿತಿ, ಹೊಸಗನ್ನಡ ಭಾಷಾ ಸಾಹಿತ್ಯದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ವಾಸುದೇವಯ್ಯನವರು 1852 ಆಗಸ್ಟ್ 02 ರಂದು ಚನ್ನಪಟ್ಟಣದಲ್ಲಿ ಜನಿಸಿದರು. ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ವಿದ್ಯಾ ಇಲಾಖೆಯ ಇನ್‌ಸ್ಪೆಕ್ಟರ್ ಜೆನರಲ್ ಕಚೇರಿಯಲ್ಲಿ ಗುಮಾಸ್ತರಾಗಿ, ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಇವರು ಮಕ್ಕಳಿಗಾಗಿ ಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದರು. ಬಂಗಾಳಿ ಭಾಷೆಯ ರಾಜಪುತ್ರ ಮಹಿಮೆ ಕೃತಿಯನ್ನು ಆರ್ಯಕೀರ್ತಿ ಭಾಗ-೧ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದರು. ಆರ್ಯಕೀರ್ತಿ ಭಾಗ-೨, ಭೀಷ್ಮನ ಸತ್ಯ ಪ್ರತಿಜ್ಞೆ ಸೇರಿದಂತೆ ಹಲವು ಕೃತಿಗಳನ್ನು ...
READ MORE