‘ಗುಲ್ ಮೊಹರ್’ ಜಯಂತ್ ಕಾಯ್ಕಿಣಿ ಅವರ ಲೇಖನ ಸಂಕಲನ. ‘ಸಮುದ್ರ, ನದಿ ಅಥವಾ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿಯುವವರು ತಮ್ಮ ಬಟ್ಟೆ ಚಪ್ಪಲಿ ವಾಚು, ಕನ್ನಡಕ ಪೆನ್ನು ಪಾಕೀಟು ಇತ್ಯಾದಿಗಳನ್ನು ತೀರದಲ್ಲಿ, ಆಚೆ ಈಚೆ ನೋಡಿ ಇಟ್ಟು ಹೋಗಿರುತ್ತಾರೆ. ವಕಿಯ ಖಾಸಾ ಲಕ್ಷಣಗಳನ್ನೆಲ್ಲ ಆತ್ಮಗತ ಮಾಡಿಕೊಂಡಿರುವ ಆ ವಸ್ತುಗಳ ಪುಟ್ಟ ಗುಚ್ಚ, ಒಂದು ನಿರುಪದ್ರವಿ ಸ್ವಾತಂತ್ರ ದಲ್ಲಿರುತ್ತದೆ, ವ್ಯಕ್ತಿಯ ಹಾಜರಿಯನ್ನೂ ಸಾರುವಂತಿರುತ್ತದೆ. ಒಂದು ಅಲಿಖಿತ ವಿಶ್ವಾಸ ಅಲ್ಲಿರುತ್ತದೆ.
ಬರವಣಿಗೆಯ ವ್ಯವಸಾಯವೂ ಇಂಥದೊಂದು ವ್ಯಾಪಕ ಅನಾಮಿಕ ಕೌಟುಂಬಿಕತೆಯ ಅಲಿಖಿತ ವಿಶ್ವಾಸದಲ್ಲೇ ನಡೆಯುವಂಥದು’ ಎನ್ನುತ್ತಾರೆ ಲೇಖರ ಜಯಂತ್ ಕಾಯ್ಕಿಣಿ. ಅವರ ಈಚಿನ ಕಥನೇತರ ಪ್ರತಿಫಲನಗಳು ಈ ಕೃತಿಯಲ್ಲಿ ಕಲೆಗೊಂಡಿವೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ. ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...
READ MORE