ಸೃಷ್ಟಿ - ದೃಷ್ಟಿ ಅರುಣ ಕುಮಾರ ಹಬ್ಬು ಲೇಖನಗಳ ಸಂಗ್ರಹವಾಗಿದೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ನಾಡಿನ ಖ್ಯಾತ ದೈನಿಕಗಳಲ್ಲಿ ಪತ್ರಕರ್ತರಾಗಿ ಶ್ರಮಿಸಿದ ಅರುಣಕುಮಾರ ಹಬ್ಬು ಅವರದ್ದು ಬಹು ಮುಖ್ಯ ವ್ಯಕ್ತಿತ್ವ, ಎರಡು ಸ್ನಾತಕೋತ್ತರ ಪದವಿ ಗಳಿಸಿದ ಅವರು ಶಿಕ್ಷಕರಾಗಿ ಅನಂತರ ಪತ್ರಿಕಾರಂಗಕ್ಕೆ ಇಳಿದರು. ಪ್ರತಿಭೆಗೆ ಹೆಸರಾದ ಅವರು ಕರ್ನಾಟಕದ ಅದರಲ್ಲಿಯೂ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ನೂರಾರು ಉಪಯುಕ್ತಲೇಖನಗಳನ್ನು ಬರೆದಿದ್ದಾರೆ. ಸುಧಾ ಸಾಪ್ತಾಹಿಕದಲ್ಲಿ ಅನೇಕ ಮೌಲ್ವಿಕ, ಲೇಖನಗಳು ಪ್ರಕಟವಾಗಿವೆ. 'ಉದಯವಾಣಿ' ಪತ್ರಿಕೆಯಲ್ಲಿ ಸುಮಾರು ಎಂಟು ವರ್ಷ ಶ್ರಮಿಸಿದ ಅವರು ಬರೆದ ಲೇಖನಗಳು ಜನಪ್ರಿಯವಾಗಿವೆ. ಜತೆಗೆ 'ತರಂಗ' ಸಾಪ್ತಾಹಿಕದಲ್ಲಿ ಅನೇಕ ಲೇಖನಗಳನ್ನು ಬರೆದು ಜನಮನ್ನಣೆ ಗಳಿಸಿದ್ದಾರೆ. ಇಲ್ಲಿಯವರೆಗೆ ಅವರು ಬರೆದ ಲೇಖನಗಳು ಸಾವಿರ ದಾಟಿವೆ. ಎಲ್ಲವೂ ಮಾಹಿತಿ ಹಾಗೂ ಜ್ಞಾನ ಒದಗಿಸುವಲ್ಲಿ ಯಶಸ್ವಿಯಾಗಿವೆ. ಅಲ್ಲದೇ ಬಹುತೇಕ ಲೇಖನಗಳು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿದ್ದು ಅವುಗಳಲ್ಲಿ 64 ಪ್ರಮುಖ ಲೇಖನಗಳನ್ನು ಸೃಷ್ಟಿ-ದೃಷ್ಟಿ' ಗ್ರಂಥಕ್ಕೆ ಆಯ್ಕೆ ಮಾಡಲಾಗಿದೆ. ಅವು ಓದುಗರ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ ಎನ್ನುವುದು ನಿಸ್ಸಂಶಯ. ಅಲ್ಲದೇ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ನುಡಿ ಚಿತ್ರ ಬರೆಯಲು ಈ ಗ್ರಂಥ ಮಾರ್ಗದರ್ಶಿಯಾಗಲಿದೆ ಶಿವಯೋಗಿ. ಜಿ. ಮದನಬಾವಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಅರುಣಕುಮಾರ ಹಬ್ಬು ಉತ್ತರ ಕನ್ನಡ ಜಿಲ್ಲೆಯ ಕಾರವಾರದವರು. ಪ್ರೌಢ ಶಿಕ್ಷಣವನ್ನು ರಾಜರಾಜೇಶ್ವರಿ ಪ್ರೌಢಶಾಲೆ ಮಂಚಿಕೇರಿ, ಪದವಿ ಪೂರ್ವ ಶಿಕ್ಷಣವನ್ನು ಧಾರವಾಡದ ಜೆ.ಎಸ್.ಎಸ್ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಶಿವಾಜಿ ವಿಶ್ವವಿದ್ಯಾಲಯ, ಕೊಲ್ಲಾಪುರದಲ್ಲಿ ಪೂರ್ಣಗೊಳಿಸಿದರು. ಉಪನ್ಯಾಸಕನಾಗಿ ,ವರದಿಗಾರನಾಗಿ,ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಅನೇಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಕೃತಿಗಳು: ‘ದೃಷ್ಟಿ-ಸೃಷ್ಟಿ’ 64 ಲೇಖನಗಳ ಗ್ರಂಥ ಪ್ರಕಟನೆ, ನೀವು ಉತ್ತಮ ಸಂದರ್ಶಕರಾಗಬಯಸುವಿರಾ? , ಸುದ್ದಿ: ಜಗದಗಲ ಮುಗಿಲಗಲ, ವೈವಿಧ್ಯ ಕಲಾನಿಧಿ ಗೋಪಾಲಕೃಷ್ಣ ನಾಯಕರು: ಜೀವನ ಚರಿತ್ರೆ, ಗೌತಮ ಬುದ್ಧರ ತ್ರಿಪಿಟಕ ಅಂಗುತ್ತರ ನಿಕಾಯದ ಕನ್ನಡಾನುವಾದ ಮಹಿಳೆ ಮತ್ತು ಮಾಧ್ಯಮ ...
READ MORE