ನಾಗತಿಹಳ್ಳಿ ಚಂದ್ರಶೇಖರ ಅವರ ಇಷ್ಟಕಾಮ್ಯ ಭಾವ ಸಂವಾದ -ಶೀರ್ಷಿಕೆಯೇ ಸೂಚಿಸುವಂತೆ ಈ ಕೃತಿಯು ನಾಗತಿಹಳ್ಳಿ ಚಂದ್ರಶೇಖರ ಅವರ ಸಾಹಿತ್ಯಕ ಹಾಗೂ ವ್ಯಕ್ತಿಗತ ಆಯಾಮವನ್ನು ಪರಿಚಯಿಸುತ್ತದೆ. ವಿವಿಧ ಲೇಖಕರು ತಮ್ಮ ಒಡನಾಟದ ಮೂಲಕ ಕಂಡುಕೊಂಡ ಅನುಭವ-ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಲೇಖಕ ನಾಗತಿಹಳ್ಳಿ ಅವರ ಸಂಪೂರ್ಣ ವ್ಯಕ್ತಿತ್ವವನ್ನು ಪರಿಚಯಿಸಲಾಗಿದೆ.