ನ.ರವಿಕುಮಾರ ಸಂಪಾದಕತ್ವದಲ್ಲಿ 2020ರಲ್ಲಿ ಮೂಡಿಬಂದ ಅಭಿನವ ಚಾತುರ್ಮಸಿಕ ‘ಹಸಿದವನಿಗೆ ಅನ್ನವೇ ದೇವರು’. ಅಭಿನವ ಚಾತುರ್ಮಾಸಿಕದ 27ನೇ ಸಂಪುಟ ಇದಾಗಿದೆ. ಕೃತಿಯ ಅನುಕ್ರಮದಲ್ಲಿ ಹುಲ್ಲ ತರುವರ ಮನೆಗೆ ಹಾಲು ಕೊಡುವೆ, ರೈತರು ಮತ್ತು ಬಿತ್ತನೆಬೀಜ ಸ್ವಾತಂತ್ಯ್ರದ ರಕ್ಷಣೆ, ನಾನು ಯಾವಾಗಲೂ ಪೂರ್ಣ ಶಾಕಾಹಾರವಾದಿ, ಆಹಾರ ಮತ್ತು ಹಸಿವು, ಭಾರತದಲ್ಲಿ ಹಸಿವು ಮತ್ತು ಬಡತನ, ನಿರಂತರ ಹಸಿರುಕ್ರಾಂತಿ, ಹಸಿವು, ಆಹಾರ ಮತ್ತು ಮನೋವಿಜ್ಞಾನ ಸೇಇದಂತೆ ಇಪ್ಪತ್ತಕ್ಕೂ ಹೆಚ್ಚು ಶೀರ್ಷಿಕೆಗಳಿವೆ.
ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ, ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು. ಕರ್ನಾಟಕ ಪ್ರಕಾಶಕರ ...
READ MORE