‘ಪ್ರತಿರೋಧ’ ಜಿ.ಕುಮಾರಪ್ಪ ಅವರ ಅನುವಾದಿತ ಲೇಖನಗಳ ಬರಹವಾಗಿದೆ. ಬಂಗಾಳದ ಶ್ರೇಷ್ಠ ವಿಚಾರವಾದಿಗಳ ಹಾಗೂ ಕೆಲವು ವಿಜ್ಞಾನಿಗಳ ವಿದ್ವತ್ಪೂರ್ಣ ಲೇಖನಗಳು, ವೇದಕಾಲೀನ ಸಮಾಜದ ನೈಜ ಚಿತ್ರಣವನ್ನು ಸಾಕಷ್ಟು ಓದಿನಿಂದ ಸಂಗ್ರಹಿಸಿ ಜನಸಾಮಾನ್ಯನವರೆಗೂ ತಲುಪಿಸಿ ವೈಚಾರಿಕ ಆಂದೋಲನವೊಂದಕ್ಕೆ ಕಾರಣ ರಾದವರಲ್ಲಿ ಬಂಗಾಳದ ಪ್ರತಿಭಾವಂತರು ಸೇರಿದ್ದಾರೆ.
ಕನ್ನಡ ಸಾಹಿತ್ಯ ವಲಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಬರಹಗಾರ ಅನುವಾದಕ ಜಿ. ಕುಮಾರಪ್ಪ ಅವರು ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗ್ರಾಮದವರು. ಕೋಲ್ಕತ್ತಾದ ಬಂಗಾಲಿ ನ್ಯಾಷನಲ್ ಗ್ರಂಥಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದವರು. ಧೀಮಂತ, ಜಪಾನಿ ಹೈಕಗಳು ಕೃತಿಗಳನ್ನು ರಚಿಸಿರುವ ಇವರು ಬಂಗಾಲಿಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾತೆಯರು ಮಾನ್ಯರಾಗಿದ್ದಾಗ, ಸಂಶೋಧನೆಯ ಹಾದಿ, ಪ್ರತಿರೋಧ ಮುಂತಾದವು ಇವರು ಅನುವಾದಿಸಿರುವ ಪ್ರಮುಖ ಕೃತಿಗಳು. ...
READ MOREಹೊಸತು-2004- ಮೇ
ಇವು ದೇವಿಪ್ರಸಾದ್ ಚಟ್ಟೋಪಾಧ್ಯಾಯ ಸಂಪಾದಿಸಿದ ಬಂಗಾಳದ ಶ್ರೇಷ್ಠ ವಿಚಾರವಾದಿಗಳ ಹಾಗೂ ಕೆಲವು ವಿಜ್ಞಾನಿಗಳ ವಿದ್ವತ್ತೂರ್ಣ ಲೇಖನಗಳು, ವೇದಕಾಲೀನ ಸಮಾಜದ ನೈಜ ಚಿತ್ರಣವನ್ನು ಸಾಕಷ್ಟು ಓದಿನಿಂದ ಸಂಗ್ರಹಿಸಿ ಜನಸಾಮಾನ್ಯನವರೆಗೂ ತಲುಪಿಸಿ ವೈಚಾರಿಕ ಆಂದೋಲನವೊಂದಕ್ಕೆ ಕಾರಣ ರಾದವರಲ್ಲಿ ಬಂಗಾಳದ ಪ್ರತಿಭಾವಂತರು ಸೇರಿದ್ದಾರೆ. ಮೂಢ ಆಚರಣೆಗಳ ಬಗ್ಗೆ ಬೌದ್ಧಿಕ ಅಂಧಕಾರದ ಬಗ್ಗೆ ಪ್ರತಿರೋಧ ವ್ಯಕ್ತಪಡಿಸುತ್ತಲೇ ಜನರನ್ನು ಎಚ್ಚರಿಸಿದ್ದಾರೆ. ಪ್ರಾಚೀನ ಭಾರತದ ತತ್ವಶಾಸ್ತ್ರ- ಇತಿಹಾಸದ ಬಗ್ಗೆ ಒಂದು ಚರ್ಚೆಯನ್ನೊಳಗೊಂಡ ಲೇಖನಗಳು.