ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು

Author : ಡಿ. ಮಂಗಳಾ ಪ್ರಿಯದರ್ಶಿನಿ

Pages 232

₹ 160.00




Year of Publication: 2015
Published by: ಹೇಮಂತ ಸಾಹಿತ್ಯ

Synopsys

ಲೇಖಕಿಯವರು ತಮ್ಮ ವಿಸ್ತಾರವಾದ ಅಧ್ಯಯನ, ಆಳವಾದ ಚಿಂತನೆ ಮತ್ತು ವಿಶ್ಲೇಷಣಾ ಸಾಮರ್ಥ್ಯಗಳಿಂದ ‘ನವೋದಯ ಕಾವ್ಯ’ ದಲ್ಲಿ ಅನುಭಾವದ ಹೊಳಹುಗಳನ್ನು ಪದರ ಪದರವಾಗಿ ಗುರುತಿಸುತ್ತ ನವೋದಯ ಕಾವ್ಯ ಅಧ್ಯಯನದ ಗಡಿ-ಗೆರೆಗಳನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಅಧ್ಯಾಯ 1 – ‘ಅನುಭಾವ’ ಅದರ ವ್ಯಾಖ್ಯೆ ವ್ಯಾಪ್ತಿ, ಅಧ್ಯಾಯ 2 – ಅನುಭಾವದ ಪಥ,ಅಧ್ಯಾಯ 3 – ಅನುಭಾವಿಕ ಹಂತದ ವಿವಿಧ ಅನುಭವಗಳು, ಅಧ್ಯಾಯ 4 – ಅನುಭಾವದ ಮಾದರಿಗಳು, ಅವುಗಳ ವರ್ಗೀಕರಣ ಹಾಗೂ ಅವುಗಳ ಆಶಯ,ಅಧ್ಯಾಯ 5 – ಅನುಭಾವಿಕ ಹಂತದ ಲಕ್ಷಣಗಳು,ಅಧ್ಯಾಯ 6 – ಕೆಲವು ಸಂಬಂಧಗಳು,ಅಧ್ಯಾಯ 7 – ಅನುಭಾವ ಮತ್ತು ತರ್ಕ,ಅಧ್ಯಾಯ 8 – ಅನುಭಾವದ ಮೌಲ್ಯ ವಿವೇಚನೆ ಎಂಬ ಶೀರ್ಷಿಕೆಗಳ ಅಧ್ಯಾಯಗಳಿವೆ.

About the Author

ಡಿ. ಮಂಗಳಾ ಪ್ರಿಯದರ್ಶಿನಿ

ಬೆಂಗಳೂರಿನವರೇ ಆದ ಡಿ.ಮಂಗಳಾ ಪ್ರಿಯದರ್ಶಿನಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಹಲವು ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ವಿ.ವಿ.ಎಸ್. ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ನವೋದಯ ಕಾವ್ಯದಲ್ಲಿ ಅನುಭವದ ಅಂಶಗಳು- ಒಂದು ಅಧ್ಯಯನ, ಬೇಂದ್ರೆ, ವೀರಶೈವ ಶಟ್ಪದಿ ಸಾಹಿತ್ಯ, ಆಧುನಿಕ ಕನ್ನಡ ಕಾವ್ಯದ ಸ್ವರೂಪ, ಮಹಿಳಾ ಸಾಹಿತ್ಯ ಚರಿತ್ರೆ, ಸ್ತ್ರೀವಾದ ಮಹಿಳಾ ಅಧ್ಯಯನ- ಒಂದು ಪ್ರವೇಶಿಕೆ, ಕಡಲಾಚೆಯ ನೆನಪುಗಳು ಮುಂತಾದವು.  ಇವರಿಗೆ ರಾಷ್ಟ್ರಕವಿ ಕುವೆಂಪು ಸ್ಮಾರಕ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ...

READ MORE

Related Books