ಹಿರಿಯ ಸಾಹಿತಿ ಚಂದ್ರಶೇಖರಕಂಬಾರ ಅವರ ಸಾಹಿತ್ಯ, ಜಾನಪದ, ರಂಗಭೂಮಿ ಕುರಿತು ಬರೆದ ಅಪೂರ್ವ ಒಳನೋಟಗಳಿರುವ ಗದ್ಯ ಬರಹದ ಸಂಕಲನ ‘ದೇಶಿಯ ಚಿಂತನೆ’.ಕಂಬಾರರು ಹೇಗೆ ಶ್ರೇಷ್ಠ ಕವಿ, ನಾಟಕಕಾರ, ಕಾದಂಬರಿಕಾರರೋ ಹಾಗೆಯೇ ಅಪೂರ್ವ ಚಿಂತಕರು ಕೂಡ ಹೌದು ಎಂಬುದಕ್ಕೆ ಈ ಕೃತಿಯೂ ಕೂಡ ಉತ್ತಮ ನಿದರ್ಶನ.
"ಕಂಬಾರರು ತೃತೀಯ ಜಗತ್ತಿನ ಸದ್ಯದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂದರ್ಭದಲ್ಲಿ, ಬರವಣಿಗೆಯ `ಹೊಸ' ಸಾಧ್ಯತೆ, ಸ್ವರೂಪಗಳನ್ನು ಶೋಧಿಸಿ ಕೊಳ್ಳುತ್ತಿರುವ ತುಂಬ ಮಹತ್ವಾಕಾಂಕ್ಷೆಯ ಲೇಖಕರು."-ಟಿ.ಪಿ. ಅಶೋಕ
ಕಂಬಾರರು ಬರೆಯುವಂಥ ನಾಟಕವಾಗಲಿ, ಪದ್ಯಗಳಾಗಲಿ ಖಂಡಿತ ಪಾಶ್ಚಾತ್ಯರಲ್ಲೂ ಇಲ್ಲ - ಯು.ಆರ್. ಅನಂತಮೂರ್ತಿ
ಹೀಗೆ ಅನೇಕ ಸಾಹಿತಿಗಳು ಕಂಡಂತೆ ಕಂಬಾರರು ಎಂಬ ನಿಲುವಿನ ಅಭಿಪ್ರಾಯಗಳು ಕೃತಿಯ ಬೆನ್ನುಡಿಯಲ್ಲಿವೆ.
ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ...
READ MORE