ವೈದ್ಯ, ಮತ್ತೊಬ್ಬ

Author : ಗುರುಪ್ರಸಾದ ಕಾಗಿನೆಲೆ

Pages 100

₹ 120.00




Published by: ಚಂದ ಪುಸ್ತಕ
Address: ಬನ್ನೇರ್‌ಘಟ್ಟ ರಸ್ತೆ, ಬೆಂಗಳೂರು- 560083

Synopsys

ತಮ್ಮ ವೈದ್ಯಕೀಯ ವೃತ್ತಿಯ ಅನುಭವದಿಂದ ಹಲವು ವಿಶಿಷ್ಟ ಪ್ರಬಂಧ, ಲೇಖನಗಳನ್ನು ಬರೆಯುತ್ತಾ ಬಂದಿರುವ ಲೇಖಕ ಗುರುಪ್ರಸಾದ್‌ ಕಾಗಿನೆಲೆ ಅವರ ಮತ್ತೊಂದು ಲೇಖನಗಳ ಸಂಕಲನ ಕೃತಿ ʻವೈದ್ಯ, ಮತ್ತೊಬ್ಬʼ. ವೈದ್ಯನೊಬ್ಬನು ತಾನು ಬದುಕುತ್ತಿರುವ ವ್ಯವಸ್ಥೆಯ ಗುಣದೋಷಗಳನ್ನು, ಅಲ್ಲಿ ಉಂಟಾಗುವ ನೈತಿಕ ಬಿಕ್ಕಟ್ಟುಗಳನ್ನು, ನಿರ್ಮಮವಾಗಿ ಆದರೆ ಭಾವಸಹಿತವಾಗಿ ಮಂಡಿಸುವ ಲೇಖನಗಳು ಇಲ್ಲಿವೆ. ಅನುಭವಗಳ ಹಿನ್ನೆಲೆಯಲ್ಲಿ ಬರೆದ ಲೇಖನಗಳಲ್ಲಿ ಅವರ ಅನೇಕ ತಲ್ಲಣಗಳನ್ನೂ ಕಾಣಬಹುದು.

About the Author

ಗುರುಪ್ರಸಾದ ಕಾಗಿನೆಲೆ

ಗುರುಪ್ರಸಾದ್ ಕಾಗಿನೆಲೆ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಡೆಟ್ರಾನ್ಸ್‌ನ ವೇಯ್ಡ್ ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸ, ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ರಕಟಿತ ಕೃತಿಗಳು: 'ನಿರ್ಗುಣ' ಕಥಾಸಂಕಲನ, 'ವೈದ್ಯ, ಮತ್ತೊಬ್ಬ' ಲೇಖನ ಸಂಗ್ರಹ ಮತ್ತು 'ಗುಣ' ಕಾದಂಬರಿ, ಸಂಪಾದಿತ ಕಥಾಸಂಕಲನ 'ಆಚೀಚೆಯ ಕಥೆಗಳು'. ಇತ್ತೀಚಿನ ಕಾದಂಬರಿ 'ಹಿಜಾಬ್ ಸೇರಿದಂತೆ ಹಲವಾರು ...

READ MORE

Related Books