ಲೇಖಕ ಉಮೇಶ್ ಎಸ್ ಅವರು ಜಗತ್ತಿನ ಭಯಾನಕ ಯುದ್ಧಭೂಮಿಗಳ ಸಾಹಸಗಾಥೆಯ ಕುರಿತು ಬರೆದಿರುವ ಕೃತಿ ಸಿಯಾಚಿನ್. 28 ಲೇಖನಗಳ ಸಹಿತವಾದ ಇಂಥ ಮಹೋನ್ನತ ಪುಸ್ತಕ. ಸಾಮಾನ್ಯವಾಗಿ ಅನೇಕರಿಗೆ ಸೇನೆ ಅಂದರೆ ಭೂಸೇನೆ, ವಾಯುಸೇನೆ, ನೌಕಾಸೇನೆ ಅಂತ ಮೂರು ಸೇನೆಗಳ ಬಗ್ಗೆ ತಿಳಿರುತ್ತದೆ. ಅದರಲ್ಲಿರುವ ಕೆಲ ಹುದ್ದೆಗಳ ಕುರಿತು ಮಾತ್ರ ಮೇಲ್ನೋಟಕ್ಕೆ ತಿಳಿದುಕೊಳ್ಳುವ ಪ್ರಯತ್ನ ಮಾಡಿರುತ್ತಾರೆ. ಆದರೆ ನೀವು ಸಿಯಾಚಿನ್ ಪುಸ್ತಕದಲ್ಲಿ ಭಾರತೀಯ ಸೈನ್ಯದ ವರ್ಗಶ್ರೇಣಿಯ ನೀಡಿದ ಮಾಹಿತಿ ಅರ್ಥಪೂರ್ಣವಾಗಿದೆ. ವಿಶ್ವಗುರುವಾಗುತ್ತ ಭಾರತದ ಹೆಜ್ಜೆ ಒಂದು ಕಡೆಯಾದರೆ, ಬಲಿಷ್ಠ ಭಾರತವನ್ನು ಯಾವ ಹೊರದೇಶವೂ ಮುಟ್ಟಲಾಗದು ಎಂಬ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀಯವರ ನೇರ ಸಂದೇಶವನ್ನು ಮತ್ತು ಅದರ ಕ್ರಿಯಾತ್ಮಕತೆಯ ಚುರುಕನ್ನು ಆಗಲೇ ಪಾಕಿಸ್ತಾನಕ್ಕೆ ನೀಡಿದ್ದನ್ನು ಲಾಮಾಗಳ ನಾಡು ಲಡಾಕ್ ಎಂಬ ಲೇಖನದಲ್ಲಿ ದಾಖಲಿಸುವ ಮೂಲಕ ರಕ್ಷಣಾತ್ಮಕ ಭಾರತದ ಚಿತ್ರಣವನ್ನು ಓದುಗನಿಗೆ ನೀಡಲಾಗಿದೆ. ಜಗತ್ತಿನ ಅತಿ ಎತ್ತರದ ರಸ್ತೆಯಲ್ಲಿ ಭಾರತದ ಪತಾಕೆಯನ್ನು ಹಿಡಿದು ನಿಲ್ಲುವ ರೋಮಾಂಚನದ ಅನುಭವದ ಜೊತೆಯಲ್ಲಿಯೇ ಕನ್ನಡದ ಬಾವುಟ ಹಾರಾಡಿಸುವ ಲೇಖಕ ಉಮೇಶ್ ಅವರ ತಾಯ್ನಾಡ ಅಭಿಮಾನ ಮೆಚ್ಚುವಂಥದ್ದು.
ಲೇಖಕ ಉಮೇಶ್ ಎಸ್. ಅವರು ಮೂಲತಃ ಮೈಸೂರಿನವರು. ಸಮಕಾಲೀನಕ್ಕೆ ಸ್ಪಂದಿಸುತ್ತಲೇ ಬರವಣಿಗೆಯನ್ನು ಮುಂದುವರಿಸುತ್ತಾರೆ. ಅಕ್ಕರೆ : ಎಚ್ಚೆಸ್ವಿ ಸಾಹಿತ್ಯಾಭಿನಂದನೆ, ತಾಷ್ಕೆಂಟ್ ಡೈರಿ’ ಅವರ ಇತ್ತಿಚಿನ ಪ್ರಕಟಿತ ಕೃತಿಗಳು. ...
READ MORE