‘ಎ.ಆರ್. ಕೃಷ್ಣಶಾಸ್ತ್ರೀ ಅವರ ಬೆಲೆಬಾಳುವ ಬರಹಗಳು’ ಲೇಖಕ ಎಲ್.ಎಸ್.ಶೇಷಗಿರಿರಾವ್ ಅವರು ಸಂಪಾದಿಸಿರುವ ಕೃತಿ. ಎ.ಆರ್. ಕೃಷ್ಣಶಾಸ್ತ್ರಿ ಅವರು ಕಳೆದ ಶತಮಾನದಲ್ಲಿ ಕನ್ನಡನಾಡು ಕಂಡ ಅಸಾಧಾರಣ ವಿದ್ವಾಂಸರಲ್ಲಿ ಒಬ್ಬರು. ಅವರು ಒಂದು ಭಾಷಣದಲ್ಲಿ ತಮಗೆ ಸಂಸ್ಕೃತದಲ್ಲಿಯೂ ಪ್ರವೇಶವಿದೆ: ಕನ್ನಡಕ್ಕಿಂತ ಅದರಲ್ಲಿ ಹೆಚ್ಚು ಪ್ರವೇಶವಿದೆ ಎಂದಿದ್ದರು. ಅವರ ವಿದ್ವತ್ತು ಅವರ ಪ್ರಜ್ಞೆಯ ಹಾಲಿನಲ್ಲಿ ಕರಗಿಹೋದ ಸಕ್ಕರೆ ವಚನ ಭಾರತದ ಮುನ್ನುಡಿ. ಶಬ್ದಗಳ ವ್ಯುತ್ಪತ್ತಿ ಅರ್ಥಗಳ ಚರ್ಚೆ ಹರಿಶ್ಚಂದ್ರ ಕಾವ್ಯಕ್ಕೆ ಅವರು ಬರೆದ ಪೀಠಿಕೆ ಇವುಗಳಲ್ಲಿ ಒಂದೊಂದೂ ಅವರ ವಿದ್ವತ್ತಿಗೆ ಕನ್ನಡಿ. ಶಾಸ್ತ್ರಿಗಳ ಕ್ರಿಯಾಶೀಲ ಕನ್ನಡ ಅಭಿಮಾನ, ಕನ್ನಡ ನಾಡಿನಲ್ಲಿ ಕನ್ನಡದ ಸ್ಥಾನದ ಸ್ಪಷ್ಟ ಕಲ್ಪನೆ ಅವರಿಗಿತ್ತು ಕನ್ನಡಕ್ಕೆ ಅನ್ಯಾಯ ವಾದಾಗಲೆಲ್ಲಾ ಜನರನ್ನು ಎಚ್ಚರಿಸಿದರು ಅವರ ಬೆಲೆಬಾಳುವ ಬರಹಗಳನ್ನು ಎಲ್.ಎಸ್.ಶೇಷಗಿರಿರಾವ್ ಅವರು ಸಂಪಾದಿಸಿದ್ದಾರೆ.
ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...
READ MORE