ಲೇಖಕ ಬಿ.ಟಿ. ಬೆಳಗಟ್ಟ ಅವರು ಸಂಪಾದಿಸಿದ ಲೇಖನಗಳ ಸಂಗ್ರಹ ಕೃತಿ-ʼಮಾದಿಗತನ, ಒಂದು ಜನಾಂಗದ ಸಂಸ್ಕೃತಿಯ ಕುರಿತದ್ದಾಗಿದೆ. ಮಾದಿಗತನವು ಹಳ್ಳಿಯ ಒಂದು ಜನಾಂಗದ ವೃತ್ತಿ ಸಂಬಂಧಿ ಶಬ್ಧವಾಗಿದೆ. ಮಾದಿಗತನಕ್ಕೆ ಇದ್ದ ಬೇಡಿಕೆ ಹಾಗೂ ಮಹತ್ವ ಈ ಕೃತಿಯ ಮೂಲಕ ಮನದಟ್ಟಾಗುತ್ತದೆ. ದಲಿತರ ಸಾಮಾಜಿಕ ಚರಿತ್ರೆಗೆ ಇದೊಂದು ವಿಶಿಷ್ಟ ಸಂದರ್ಭ. ವ್ಯವಸ್ಥೆಯ ಭಾಗವಾಗಿ ಮಾದಿಗ ಸಮುದಾಯ ನಿರ್ವಹಿಸುತ್ತಾ ಬಂದ ಆಯಾಮವವೂ ಇಲ್ಲಿ ವಿಸ್ತೃತವಾಗಿ ವಿವರಿಸಿದೆ. ನಾವು ಕಂಡಂತೆ ಹಳ್ಳಿಗಳಲ್ಲಿ ಮಾದಿಗನಿಗೆ ಒಬ್ಬ ಒಡೆಯನಿರುವನು. ಒಡೆಯನನ್ನು ಮಾದಿಗನು ಸಾಹುಕಾರ, ಗೊಂಚಿಗಾರ ಎನ್ನುವನು. ಆ ರೀತಿಯ ಮಾದಿಗತನವನ್ನು ನನ್ನದು, ನನ್ನದೆಂದು ಎರಡು ಕುಟುಂಬಗಳು ಹೊಡೆದಾಡಿ, ಕೊನೆಗೆ ರಾಜಿಯಾಗಿ, ಸೋತವನು ಒಂದು ʼಸೋತಪತ್ರ’ ʼಕೊಟ್ಟ ಲಿಖಿತ ಉದಾಹರಣೆಯು ಇಲ್ಲಿ ಬಿಂಬಿತವಾಗಿದೆ ಎಂಬುದು ಬಿ.ಟಿ ಬೆಳಗಟ್ಟ ಅವರ ಅಭಿಪ್ರಾಯ.