ಕೀರ್ತಿ ಕಿರಣ್ ಕುಮಾರ್ ಅವರ ಲೇಖನ ಸಂಕಲನ ನೆನಪಿನ ದೋಣಿಯಲಿ. ಕೀರ್ತಿ ಕಿರಣ್ ರವರು ತಮ್ಮ ಬಾಲ್ಯ ಜೀವನದ ಸುಂದರ ನೆನಪುಗಳನ್ನು,ವಿಶಿಷ್ಟ ವಾದ ಶೀರ್ಷಿಕೆಗಳೊಂದಿಗೆ ಸರಳ ಸುಂದರವಾಗಿ ನಿರೂಪಣೆ ಮಾಡಿದ್ದಾರೆ. ಪ್ರತಿ ಲೇಖನಗಳು ಓದುಗರನ್ನು ಹಿಡಿದಿಡು ವಲ್ಲಿ ಯಶಸ್ವೀಯಾಗಿದೆ. ಮಕ್ಕಳು ಕೂಡಾ ಓದಬಹುದಾದಂತಹ ಸುಂದರ ಕೃತಿ ನೆನಪಿನ ದೋಣಿಯಲಿ.
ಕೀರ್ತಿ ಕಿರಣ್ ಕುಮಾರ್ ಸಕಲೇಶಪುರದವರು. ಇವರು 1984 ಫೆಬ್ರವರಿ 13 ರ ರಲ್ಲಿ ಕೊಡಗು ಜಿಲ್ಲೆ , ಸೋಮವಾರ ಪೇಟೆ ತಾಲ್ಲೂಕಿನ, ಹಾರಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಎನ್. ಎನ್. ಧರ್ಮಪ್ಪ ಮತ್ತು ತಾಯಿ ಸುಶೀಲ. ಬಿ. ಎಸ್ಸಿ. ಬಿ. ಎಡ್. ತರಬೇತಿ ಯನ್ನು ಜೆ. ಎಸ್ . ಎಸ್. ಶಿಕ್ಷಣ ಸಂಸ್ಥೆ ಯಲ್ಲಿ ಪಡೆದು ಕೆಲವು ವರ್ಷ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ನಾಲ್ಕು ವರ್ಷ ಗಳಿಂದ ನಾಡಿನ ಪತ್ರಿಕೆ ಗಳಿಗೆ, ಕಾಯಂ ಲೇಖಕಿಯಾಗಿ, ಸಂದರ್ಶಕಿಯಾಗಿ, ವರದಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಲಲಿತ ಪ್ರಭಂದ, ಕವಿತೆ, ಸಣ್ಣ ಕಥೆ, ...
READ MORE