ವಿಮರ್ಶಕ, ಲೇಖಕ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರ ವಿಮರ್ಶಾ ಲೇಖನಗಳ ಸಂಗ್ರಹ ಕೃತಿ ’ಚಕ್ರವರ್ತಿಯ ಬಟ್ಟೆಗಳು’.
ಚಕ್ರವರ್ತಿಯ ಹೊಸ ಬಟ್ಟೆಗಳು, ಶೇಕಡಾ ಏಳರ ಖಳರು, ನಿಜವೋ ಸುಳ್ಳೋ ನಿರ್ಧರಿಸಿ, ದೇಶಿಯತೆ ಎಂಬ ಗಾಳಿಗೋಪುರ, ಇವು ನೆನಪುಗಳಲ್ಲ, ತಂತಿಯ ಮೇಲಿನ ನಡಿಗೆ, ಧರ್ಮ ಮತ್ತು ಸಾಹಿತ್ಯ, ಬೆರಳು ಕೇಳಿದ ಗುರು-ಕಣ್ಣು ಕೊಟ್ಟ ಗುರು, ಪದವಿ ತರಗತಿಗಳಲ್ಲಿ ಭಾಷಾ ಶಿಕ್ಷಣ ಕನ್ನಡ, ಹಲವು ಬಣ್ಣದ ಹಕ್ಕಿ : ಐವತ್ತು ವರ್ಷಗಳ ಕನ್ನಡ ಸಾಹಿತ್ಯ, ಖಾಸಗಿ ಮತ್ತು ಸಾರ್ವಜನಿಕ-ದೇವನೂರ ಮಹಾದೇವರ ಮಾದರಿ, ಧರ್ಮ ಮತ್ತು ಸಾಹಿತ್ಯ, ಜನಪದ ಕಾವ್ಯದ ರೂಪಮೀಮಾಂಸೆ, ಇನ್ನೂ ಮುಂತಾದ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...
READ MORE