‘ನಮ್ಮ ಸ್ಕೂಲ್ ಡೈರಿ’ ಕೃತಿಯು ಬೇದ್ರೆ ಮಂಜುನಾಥ ಅವರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತ ಮಾಹಿತಿ ಸಾಹಿತ್ಯ ಕೈಪಿಡಿಯಾಗಿದೆ. ಈ ಕೃತಿಯು ಪ್ರಮುಖ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳು ಹಾಗೂ ಸಾಮಾನ್ಯಜ್ಞಾನ ಮಾಹಿತಿಯನ್ನು ನೀಡುತ್ತದೆ. 2020 ರ ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಕಲಿಕಾ ವಾತಾವರಣವೇ ಸೃಜನಶೀಲವಾಗಿ ಬದಲಾಗಿದೆ. ಅಂತರ್ಜಾಲದ ಮಾಹಿತಿ ಮಹಾಪೂರದಲ್ಲಿ ಏನನ್ನು ತೆಗೆದುಕೊಳ್ಳಬೇಕು, ಏನನ್ನು ಬಿಡಬೇಕು, ಎಷ್ಟು ಮಾಹಿತಿ ಬಳಸಿ ಕೊಂಡರೆ ಸೂಕ್ತ ಎನ್ನುವುದನ್ನು ನಿರ್ಧರಿಸಲು ಆಗದಿರುವ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಸಂದರ್ಭಕ್ಕಾಗಿ, ಶಾಲೆಗಳಲ್ಲಿ ನಡೆಸಬಹುದಾದ ಒಂದಷ್ಟು ಚಟುವಟಿಕೆಗಳ ಪಟ್ಟಿ ಸಿದ್ಧಗೊಳಿಸಿ, ಪೂರಕ ಮಾಹಿತಿ ಸಂಗ್ರಹಿಸಿ, ಜ್ಞಾನದ ಪರಿಧಿಯನ್ನು ವಿಸ್ತರಿಸುವ ಹಲವು ಅಂಶಗಳನ್ನು ಈ ಕೃತಿಯು ಒಳಗೊಂಡಿದೆ ಎನ್ನುತ್ತಾರೆ ಇಲ್ಲಿ ಲೇಖಕ.
ಲೇಖಕ, ಚಿಂತಕ, ಅಂಕಣಕಾರರಾದ ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು, 10-06-1967ರಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಮಂಜುನಾಥ್ ಸದಾ ಕ್ರಿಯಾಶೀಲ ವ್ಯಕ್ತಿ. ತಮ್ಮ ಸ್ವ-ಪರಿಶ್ರಮದಿಂದಲೇ ಬೆಳೆದಿರುವ ಅವರು ಈ ವರೆಗೂ 50ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆ. ಸದ್ಯ ಆಕಾಶವಾಣಿ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜುನಾಥ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ 10 ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. ಆನಂತರ ಕುವೆಂಪು ವಿವಿಯಲ್ಲಿ ಇತಿಹಾಸದಲ್ಲಿ ಪ್ರಥಮರಾಗಿ ಪದವಿ ಗಳಿಸಿದ್ದರು. ಇಂಗ್ಲೀಷಿನಲ್ಲಿ ಎಂ.ಎ.ಮಾಡಲು ಬಯಸಿದ್ದ ಅವರು ಮೈಸೂರಿಗೆ ತೆರಳಿದರು. ಎಂ.ಎ ...
READ MORE