`ಹಣ ಹಣಿ’ ಕೃತಿಯು ರಂಗಸ್ವಾಮಿ ಮೂಕನಹಳ್ಳಿ ಅವರ ಲೇಖನಸಂಕಲನವಾಗಿದೆ. ನಾವು ಕ್ರಿಕೆಟ್, ಚೆಸ್, ಕಬಡ್ಡಿ ಹೀಗೆ ಹಲವಾರು ಆಟಗಳನ್ನು ನೋಡಿದ್ದೇವೆ, ಆಡಿದ್ದೇವೆ. ಆ ಆಟಗಳಿಗೆ ನಿಯಮಾವಳಿಗಳಿವೆ. ನಿಯಮವನ್ನು ಸರಿಯಾಗಿ ತಿಳಿದುಕೊಂಡವರು, ಶ್ರದ್ಧೆಯಿಂದ ಆಟವನ್ನು ಪ್ರಾಕ್ಟಿಸ್ ಮಾಡಿದವರು ಆಟದಲ್ಲಿ ಮೇಲುಗೈ ಸಾಧಿಸುವುದು ಸಹಜ. ಬದುಕು ಕೂಡ ಥೇಟ್ ಹೀಗೇ ಕಣ್ರೀ, ಇಲ್ಲೂ ನಿಯಮಾವಳಿಗಳಿವೆ. ಅದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೇವೆ ಅಷ್ಟು ನಮಗೆ ಒಳ್ಳೆಯದು. ಈ ರೀತಿಯ ಹುಟ್ಟಿನಿಂದ-ಸಾವಿನವರೆಗೆ ಮನುಷ್ಯನ ಜೀವನದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳಿಗೆ ಒಂದು ಔಟ್ ಲೈನ್ ಅಥವಾ ಒಂದು ಸ್ಟ್ಯಾಂಡರ್ಡ್ ಪ್ಯಾರಾಮೀಟರ್, ಪರಿಧಿಯನ್ನು ಇಲ್ಲಿಯವರೆಗೆ ಯಾರೂ ಹೇಳಿಲ್ಲ. ಏಕೆಂದರೆ ಬದುಕು ಎರಡು ಪ್ಲಸ್ ಎರಡು ನಾಲ್ಕಕ್ಕೆ ಸಮ ಎನ್ನುವಷ್ಟು ಸರಳವಲ್ಲ. ಆದರೆ ಬಹುಪಾಲು ಸಮಯ ನಾವು ಎಲ್ಲಕ್ಕೂ ಪ್ಯಾರಾಮೀಟರ್ ಸೆಟ್ ಮಾಡಬಹುದು. ವೈದ್ಯಕೀಯ ವಿಜ್ಞಾನದಲ್ಲಿ ಬಿಪಿ, ಶುಗರ್, ಪ್ಲೇಟೈಟ್ ಇಷ್ಟಿರಬೇಕು ಎನ್ನುವ ಪ್ಯಾರಾಮೀಟರ್ ಇದೆ. ಅದೇ ರೀತಿ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಪ್ಯಾರಾಮೀಟರ್ ಸೃಷ್ಟಿಸುವ ಪ್ರಯತ್ನ ಈ ಪುಸ್ತಕದಲ್ಲಿ ಮಾಡಿದ್ದೇನೆ. ಹೇಗೆ ಬಿಪಿ, ಶುಗರ್ ಅವರು ಹೇಳಿದಷ್ಟು ಎಲ್ಲರಲ್ಲೂ ಇರುವುದಿಲ್ಲವೋ ಹಾಗೆಯೇ ಇಲ್ಲಿ ನಾನು ಹೇಳಿರುವ ಪ್ಯಾರಾಮೀಟರ್ ಕೂಡ ನಿಮ್ಮ ಬದುಕಿನ ಲೆಕ್ಕಾಚಾರಕ್ಕಿಂತ ಭಿನ್ನವಾಗಿರಬಹುದು. ಇಲ್ಲಿ ಹೇಳಿರುವುದು ಒಂದು ಸ್ಟ್ಯಾಂಡರ್ಡ್ ಪರಿಧಿ. ಇದರ ಸುತ್ತಮುತ್ತವಿದ್ದರೆ ಅಷ್ಟರಮಟ್ಟಿಗೆ ನಮ್ಮ ಬದುಕು ಸರಾಗ.
ರಂಗಸ್ವಾಮಿ ಮೂಕನಹಳ್ಳಿ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇರುವ ಗ್ರಾಹಕರಿಗೆ ಹಣ ಹೂಡಿಕೆಯ ತಜ್ಞ. ಸಲಹೆಗಾರರಾಗಿ ವೃತ್ತಿ ನಿರತರು. ಹಲವಾರು ಉದ್ಯಮಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ತ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತ ಬಂದಿದ್ದಾರೆ. ಕನ್ನಡ ಮತ್ತು ಸ್ಪಾನಿಷ್ ಭಾಷೆಯ ಸಮಾನಾಂತರ ಗಾದೆಗಳನ್ನು ಗುರುತಿಸಿ ಕೃತಿಯನ್ನು ರಚಿಸಿದ್ದು, ಇದು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಮೂರು ಅಂಕಣ ಗುಚ್ಛಗಳ ಕೃತಿಗಳು ಸಹ ಪ್ರಕಟಗೊಂಡಿವೆ. ‘ಬದುಕಿಗೊಂದು ಆಶಾಭಾವ, ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು’ ಅವರ ...
READ MORE