ಲೇಖಕ ಡಾ. ಎನ್.ಎಸ್. ಮಹಂತೇಶ ಅವರ ಸಂಪಾದಿತ ಕೃತಿ ʻಇತಿಹಾಸ ಮತ್ತು …-ಡಾ. ಎಂ.ಎಂ. ಕಲಬುರ್ಗಿ ಅವರ ಇತಿಹಾಸ ಸಂಶೋಧನ ಲೇಖನಗಳ ಸಂಪುಟʼ. ಇದು ಡಾ.ಎಂ.ಎಂ.ಕಲಬುರ್ಗಿ ಅವರ ' ಮಾರ್ಗ' ಸಂಪುಟಗಳಲ್ಲಿನ ಇತಿಹಾಸಕ್ಕೆ ಸಂಬಂಧಿಸಿದ ಸುಮಾರು 30 ಸಂಶೋಧನ ಲೇಖನಗಳ ಸಂಕಲನವಾಗಿದೆ. ಕಲಬುರ್ಗಿ ಅವರು ಕರ್ನಾಟಕದ ಮಹತ್ವದ ಸಂಶೋಧಕರಲ್ಲಿ ಒಬ್ಬರು. ಅವರು ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯ ವಿವಿಧ ಮಗ್ಗಲುಗಳನ್ನು ವಿಭಿನ್ನ ಆಯಾಮಗಳಲ್ಲಿ ಚರ್ಚಿಸಿದ್ದು, ಇಲ್ಲಿ ಚರಿತ್ರೆಯನ್ನು ನೋಡಿದ ಪರಿ ವಿಶೇಷವಾಗಿದೆ. ಇವರು ಮುಖ್ಯವಾಗಿ ಕನ್ನಡ ಸಾಹಿತ್ಯ, ಭಾಷೆ, ಛಂದಸ್ಸು, ಸ್ಥಳನಾಮ, ವ್ಯಕ್ತಿನಾಮ, ನಾಮವಿಜ್ಞಾನ, ಶಾಸನ, ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನಶಾಸ್ತ್ರ ವಚನಸಾಹಿತ್ಯ ಹೀಗೆ ಕನ್ನಡ ಸಾಹಿತ್ಯದ ಅನೇಕ ಪ್ರಭೇದಗಳ ವಿಚಾರವಾಗಿ ಸಾಕಷ್ಟು ಸಂಶೋಧನೆ ಮಾಡಿರುವ ವಿಚಾರಶೀಲರು, ಅಧ್ಯಯನಶೀಲರು ಹಾಗೂ ಸಾಮಾಜಿಕ ಜಾಗೃತಿಶೀಲರು.
ಲೇಖಕ ಡಾ. ಎನ್.ಎಸ್. ಮಹಾಂತೇಶ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನೆರಳಗುಂಟೆ ಗ್ರಾಮದವರು. ತಂದೆ ಎನ್.ಡಿ. ಶಿವಣ್ಣ ಹಾಗೂ ತಾಯಿ ರೇಣುಕಮ್ಮ. ಕುವೆಂಪು ವಿ.ವಿ.ಯಿಂದ ಎಂ.ಎ (ಇತಿಹಾಸ ಹಾಗೂ ಪ್ರಕ್ತನಾಶಾಸ್ತ್ರ, ಹುಣಸೆಕಟ್ಟೆ ಮನೆತನದ ಶ್ರೀಮತಿ ಶಾರದಾ ಚಂದ್ರಶೇಖರಪ್ಪ ಚಿನ್ನದ ಪದಕದೊಂದಿಗೆ ದ್ವಿತೀಯ ರ್‍ಯಾಂಕ್), ಕನ್ನಡ ವಿ.ವಿ.ಯಿಂದ ಎಂ.ಫಿಲ್ (ವಿಷಯ: ಹೊಸದುರ್ಗ ಪರಿಸರದ ದೇವಾಲಯಗಳು),ಕನ್ನಡ ವಿ.ವಿ.ಯಿಂದ ಪಿಜಿ ಡಿಪ್ಲೊಮಾ (ವಿಷಯ: ಹೊಸದುರ್ಗ ತಾಲೂಕಿನ ಶಾಸನಗಳು), ಕನ್ನಡ ವಿ.ವಿ. ಯಿಂದ ಹೊಸದುರ್ಗ ತಾಲೂಕು ಪರಿಸರ: ಸಾಂಸ್ಕೃತಿಕ ಅಧ್ಯಯನ’ ವಿಷಯವಾಗಿ (2013) ಪಿಎಚ್ ಡಿ. ಪದವೀಧರರು. ಇತಿಹಾಸ, ಪ್ರಾಗೈತಿಹಾಸ, ಶಾಸನ, ಹಸ್ತಪ್ರತಿ, ನಾಣ್ಯ, ...
READ MORE