ಯಕ್ಷಗಾನ ಬಯಲಾಟ

Author : ಶಿವರಾಮ ಕಾರಂತ

Pages 344

₹ 225.00




Year of Publication: 2015
Published by: ರವೀಂದ್ರ ಪುಸ್ತಕಾಲಯ
Address: ಚಾಮರಾಜಪೇಟೆ, ಸಾಗರ 577401, ಶಿವಮೊಗ್ಗ ಜಿಲ್ಲೆ, ಕರ್ನಾಟಕ.
Phone: 8183228616

Synopsys

ಜ್ಡಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಅವರ ಕೃತಿ-ಯಕ್ಷಗಾನ ಬಯಲಾಟ. ಜಾನಪದೀಯ ಈ ಎರಡೂ ಕಲೆಗಳು ಅಥವಾ ಕ್ಷೇತ್ರಗಳ ಮಹತ್ವ, ಅವುಗಳ ಸಾಂಸ್ಕೃತಿಕ ವೈಭವ, ಕಲಾತ್ಮಕ ಚಿತ್ರಣ ಇತ್ಯಾದಿ ವಿಶ್ಲೇಷಿಸಿದ ಕೃತಿ.

ಯಕ್ಷಗಾನ ಕುರಿತು ಸಮಗ್ರ ನೋಟ ನೀಡಿರುವ ಕನ್ನಡದ ಮೊಟ್ಟಮೊದಲ ಸಂಶೋಧನಾತ್ಮಕ ಕೃತಿ ಎಂದೇ ಹೇಳಲಾಗುತ್ತಿದೆ. ಎರಡು ವಿಭಾಗಗಳನ್ನು ಮಾಡಿದ್ದು, ಮೊದಲನೇ ಭಾಗದಲ್ಲಿ ಸಮಷ್ಟಿ ಕಲೆ, ಹಿನ್ನೆಲೆ, ಬಯಲಾಟದ ಸಂಸ್ಥೆಗಳು, ವಸ್ತು, ಚಿತ್ರಣ ಮಾಧ್ಯಮ, ಬಯಲಾಟದ ಹುಟ್ಟು, ಬೆಳವಣಿಗೆ, ರಂಗಸ್ಥಳದ ಸಂಪ್ರದಾಯಗಳು, ಯಕ್ಷಗಾನ, ಬರೆದ ಪದ್ಯಗಳು, ಆಡುವ ಗದ್ಯ, ವೇಷಭೂಷಣಗಳು, ಆಟದ ರೂಪಾಂತರಗಳು ಹೀಗೆ ವಿವಿಧ ಆಧ್ಯಾಯಗಳಡಿ ವಿಚಾರಗಳನ್ನು ಮಂಡಿಸಿದ್ದಾರೆ. ಎರಡನೇ ಭಾಗದಲ್ಲಿ ಕವಿಕಾವ್ಯ ಪರಿಚಯ, ಹದಿನಾರು ಹದಿನೇಳು ಶತಮಾನಗಳಲ್ಲಿ, ಮುಂದಿನ ಶತಮಾನಗಳಲ್ಲಿ ಹೀಗೆ ಮೂರು ಅಧ್ಯಾಯಗಳಿವೆ. ಮೂಲ ದಾಖಲೆಗಳು ಹಾಗೂ ಛಾಯಾಚಿತ್ರಗಳೂ ಕೃತಿಯ ಮಹತ್ವವನ್ನು ಹೆಚ್ಚಿಸುತ್ತವೆ.    

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1957ರಲ್ಲಿ ಮೊದಲ ಬಾರಿಗೆ (ಪುಟ: 275 ಹಾಗೂ 7 ಪುಟಗಳ ಪರಿಶಿಷ್ಟ) ತದನಂತರ,  ಸ್ವತಃ ಕಾರಂತರು, ಈ ಗ್ರಂಥವನ್ನು ತಿದ್ದುವ ಮೂಲಕ ಪರಿಷ್ಕರಿಸಿ ಹೆಚ್ಚಿನ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ನೀಡಿದ್ದರಿಂದ, 1963ರಲ್ಲಿ (272 ಹಾಗೂ 12 ಪುಟಗಳ ಪರಿಶಿಷ್ಟ)  ಈ ಕೃತಿಯನ್ನು ಪ್ರಕಟಿಸಿತ್ತು.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books