‘ಸಮ್ಮುಖ’ ಕೆ. ನರಸಿಂಹಮೂರ್ತಿ ಅವರ ಲೇಖನಗಳ ಸಂಕಲನ. ಕನ್ನಡದ ಅಗ್ರಮಾನ್ಯ ವಿಮರ್ಶಕರಲ್ಲಿ ದಿ. ಕೆ. ನರಸಿಂಹಮೂರ್ತಿ ಒಬ್ಬರು. ಸಾಹಿತ್ಯದ ಬಗೆಗೆ ಅವರಿಗಿದ್ದ ಸೂಕ್ಷ್ಮ ಸಂವೇದನಾ ಶಕ್ತಿ ಅದ್ವಿತೀಯ. 60 ವರ್ಷಗಳ ಕಾಲ ಪಾಶ್ಚಾತ್ಯ- ಪೌರ್ವಾತ್ಯ ಸಾಹಿತ್ಯಗಳು ನಡೆದು ಬಂದ ದಾರಿಯನ್ನು ವಿಶ್ಲೇಷಿಸುತ್ತ ಬಂದ ನರಸಿಂಹಮೂರ್ತಿಯವರು ವಿಪುಲ ಸಂಖ್ಯೆಯ ವಿಮರ್ಶನ ಲೇಖನಗಳನ್ನು ಬರೆದಿದ್ದಾರೆ. ಪಾಶ್ಚಾತ್ಯ ಸಾಹಿತ್ಯವನ್ನು ಕುರಿತ ಅವರ ಲೇಖನಗಳು ಪಾಶ್ಚಾತ್ಯ ಸಾಹಿತ್ಯ ಸಮೀಕ್ಷೆ ಹಾಗೂ ಪಾಶ್ಚಾತ್ಯ ಸಾಹಿತ್ಯ ವಿಹಾರ ಎಂಬ ಎರಡು ಸಂಕಲನಗಳಲ್ಲಿ ಸೇರಿವೆ. ಹಾಗೆಯೇ , ಕನ್ನಡ ಸಾಹಿತ್ಯವನ್ನು ಕುರಿತ ಲೇಖನಗಳು ಕನ್ನಡ ಸಾಹಿತ್ಯ ವಿಹಾರ ಮತ್ತು ಅಭಿವ್ಯಕ್ತಿ ಎಂಬ ಸಂಕಲನಗಳಲ್ಲಿ ಸಂಗ್ರಹಗೊಂಡಿವೆ. ಐದನೆಯ ಪುಸ್ತಕವಾದ ‘ಸಮ್ಮುಖ’ ದಲ್ಲಿ ಈ ಎರಡೂ ಸಾಹಿತ್ಯಗಳ ಕುರಿತಾದ ಅವರ 35 ಲೇಖನಗಳು ಒಟ್ಟುಗೂಡಿವೆ. ಪ್ರತಿಯೊಂದು ಲೇಖನವೂ ನರಸಿಂಹಮೂರ್ತಿಯವರ ವಿದ್ವತ್ತು, ವಿಮರ್ಶಕ ವಿಚಕ್ಷಣೆ ಮತ್ತು ಅವರದೇ ಆದ ವಿಶಿಷ್ಟ ಗದ್ಯ ಶೈಲಿಗೆ ಕನ್ನಡಿ ಹಿಡಿಯುತ್ತದೆ.
ಕೆ. ನರಸಿಂಹಮೂರ್ತಿ (ಜನನ: 12-05-1919) ಕೋಲಾರ ಜಿಲ್ಲೆಯ ಗೌರಿಬಿದನೂರಿನ ಬಳಿಯ ಮಂಚೇನಹಳ್ಳಿಯವರು. ತಂದೆ ಕೃಷ್ಣಮೂರ್ತಿ, ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿ. ಸಂಸ್ಕೃತ ಪಂಡಿತ ಸೀತಾರಾಮ ಶಾಸ್ತ್ರಿಗಳಿಂದ ಸಾಹಿತ್ಯಾಸಕ್ತಿ. ಕಾಲೇಜಿನಲ್ಲಿ ಓದುತ್ತಿದ್ದಾಗ ಬರೆದ ಕಥೆ ‘ಬೆಳೆದಲ್ಲೇ ಉಳಿದಿದ್ದರೆ’ ಕೃತಿಗೆ ಬಹುಮಾನ. ಸಾಹಿತ್ಯ ಪರಿಷತ್ತು ನಡೆಸಿದ ವಿಮರ್ಶಾ ಸ್ಪರ್ಧೆಯಲ್ಲಿ ‘ಕನ್ನಡದ ಸಣ್ಣ ಕಥಾ ಸ್ವರೂಪ’ ಲೇಖನಕ್ಕೆ ದ್ವಿತೀಯ ಬಹುಮಾನ ಲಭಿಸಿತ್ತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಪದವಿ, ಅದೇ ಕಾಲೇಜಿನಲ್ಲಿ ಅಧ್ಯಾಪಕರಾದರು. 1943 ರಲ್ಲಿ ಇಂಗ್ಲಿಷ ಎಂ.ಎ. ಪದವೀಧರರು. 1956 ರಲ್ಲಿ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ, ಅಶೋಕ ವಿಜಯ (ಖಂಡಕಾವ್ಯ) ಪ್ರಿಯದರ್ಶಿನಿ ...
READ MORE