ನಮ್ದೇಕತೆ

Author : ರಾಜಾರಾಂ ತಲ್ಲೂರು

Pages 164

₹ 150.00




Year of Publication: 2021
Published by: ಪ್ರೊ-ಡಿಜಿ ಮುದ್ರಣ
Address: ಡೋರ್ ನಂ.6-2-27, ತಳ ಅಂತಸ್ತು, ಕೆನರಾ ಟವರ್, ಮಿಷನ್ ಆಸ್ಪತ್ರೆ ರಸ್ತೆ, ಉಡುಪಿ-1

Synopsys

ರಾಜಾರಾಂ ತಲ್ಲೂರು ಅವರ ‘ನಮ್ದೇಕತೆ’ ಬರೆಹಗಳ ಸಂಕಲನವಾಗಿದೆ. 2017ರಿಂದ 2021ರವರೆಗೆ ಫೇಸ್ ಬುಕ್ ಮುಖ ಪುಟ ಸೇರಿದಂತೆ ಹಲವೆಡೆ ಅವರು ಬರೆದ ಬರೆಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ದಿನೇಶ್ ಅಮೀನ್, ಮಟ್ಟು ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಕೊರೊನಾ, ಮಾಧ್ಯಮ, ಕೃಷಿ ಕಾಯಿದೆಗಳು, ಇತರ, ನುಣ್ಣನ ಬೆಟ್ಟ ಎಂಬ ಐದು ಮುಖ್ಯ ಶೀರ್ಷಿಕೆಗಳಿದ್ದು, ಪ್ರತಿ ಶೀರ್ಷಿಕೆಯಲ್ಲಿಯೂ ಅನೇಕ ಉಪಶಿರ್ಷಿಕೆಗಳನ್ನು ಕಾಣಬಹುದು. ಶ್ರೀನಿವಾಸ ಕಾರ್ಕಳ ಅವರು ಕೃತಿಯ ಬೆನ್ನುಡಿಯಲ್ಲಿ,‘ ಮೇಲ್ನೋಟಕ್ಕೆ ತೀರಾ ಸಾಮಾನ್ಯ ಎಂಬಂತೆ ಕಾಣುವ ಸಂಗತಿಗಳನ್ನು ಕೇಂದ್ರವಾಗಿರಿಸಿಕೊಂಡು ವಿಷವ್ಯಾಪ್ತಿಯನ್ನು ಹಿಗ್ಗಿಸುತ್ತ, ವಿಸ್ತೃತ ಸಮಸ್ಯೆಯ ಆಳ, ಅಗಲಗಳನ್ನು ಪರಿಚಯಿಸುತ್ತ,ಭೂತ ವರ್ತಮಾನಗಳನ್ನು ಚರ್ಚಿಸುತ್ತಲೇ ಭವಿಷ್ಯದ ಹಾದಿಗೆ ಬೆಳಕು ಹಿಡಿಯುವ ಇಲ್ಲಿನ ಪರಿ ಅನನ್ಯವಾದುದು. ಬಿಡುಬೇಸಾದ ಹೇಳಿಕೆಗಳು ತೀರಾ ಹಳಸಲಾದ ವಾದಗಳು ಇಲ್ಲಿ ಕಾಣಸಿಗವು. ಸಾಮಾನ್ಯವಾಗಿ ನಾವು ಯೋಚಿಸಿಯೇ ಇರದ, ಕೆಲವೊಮ್ಮೆ ಬೆಚ್ಚಿ ಬೀಳಿಸುವ ವಾಸ್ತವದ ದರ್ಶನವನ್ನು ಇವು ಮಾಡಿಸುತ್ತವೆ. ಬರಿಯ ಸಮಸ್ಯೆಗಳ ಬಗ್ಗೆ ಮಾತನಾಡದೆ ಕಾರ್ಯಸಾಧುವಾದ ಮತ್ತು ಕಾರ್ಯಸಾಧ್ಯವಾದ ಪರಿಹಾರವನ್ನೂ ಸೂಚಿಸುತ್ತವೆ ಎಂದಿದ್ದಾರೆ. ಗುರುಪ್ರಸಾದ್ ಡಿ.ಎನ್ ಬರೆದಿರುವಂತೆ,‘ ವಿವಿಧ ಸಮಯದಲ್ಲಿ ಸಾಂದರ್ಭಿಕವಾಗಿ ಬರೆದ ಲೇಖನಗಳು ಪುಸ್ತಕ ರೂಪದಲ್ಲಿ ಸಂಕಲನಗೊಂಡಾಗ ಅವನ್ನೆಲ್ಲ ಬೆಸೆಯುವ ಒಂದು ಗುಣ ಅವುಗಳಲ್ಲಿ ಇರುವುದು ಮುಖ್ಯ. ಈ ಸಂಕಲನದ ಎಲ್ಲಾ ಲೇಖನದ ಕೇಂದ್ರ ವಿಷಯ ಜರ್ನಲಿಸಂ ಅನ್ನಬಹುದು. ಒಂದು ಜರ್ನಲಿಸ್ಟಿಕ್ ಬರಹದಲ್ಲಿ ಇರಬೇಕಾದ ಅಧ್ಯಯನಶೀಲತೆ, ‘ಅಂಕಿ-ಅಂಶಗಳು ಪತ್ರಿಕೋದ್ಯಮಕ್ಕೆ ಪವಿತ್ರ’ ಎಂಬ ಪ್ರಾಥಮಿಕ ಪಾಠ , ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಹಾಗೂ ಅವುಗಳ ಜವಾಬ್ದಾರಿಗಳ ಬಗ್ಗೆ ಓದುಗರಿಗೆ ಇನ್ಫಾರ್ಮಡ್ ಒಪಿನಿಯನ್ ನೀಡುವ ಸಂಗತಿಗಳು ಈ ಬರಹಗಳಲ್ಲಿ ಮೇಳೈಸಿವೆ ಎಮಬುದು ಹೆಚ್ಚು ಮುಖ್ಯವಾದದ್ದು’ ಎಂದಿದ್ದಾರೆ.

About the Author

ರಾಜಾರಾಂ ತಲ್ಲೂರು

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ, ಸುರತ್ಕಲ್ಲಿನಲ್ಲಿ ಮಾಧ್ಯಮಿಕ ಮತ್ತು ಪದವಿ ಶಿಕ್ಷಣ ಪೂರ್ಣಗೊಳಿಸಿದ ಅವರು ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದ ಅವರು 2000 ಇಸವಿಯಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿ ಪ್ರಾರಂಭಿಸಿದಾಗ ಅದರ ಸುದ್ದಿ ಸಂಪಾದಕರಾಗಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದರು. 2001ರಲ್ಲಿ ಉದಯವಾಣಿ ಆರೋಗ್ಯ ಪುರವಣಿಯಲ್ಲಿ ಆರಂಭಗೊಂಡಾಗ ಅದರ ಸಂಪಾದಕರಾಗಿ ಸೇವೆಸಲ್ಲಿಸಿದ ಅವರು 2017ರ ತನಕವೂ ಆರೋಗ್ಯವಾಣಿಯ ಸಂಪಾದಕೀಯ ಉಸ್ತುವಾರಿ ನೋಡಿಕೊಂಡರು. ಈ ...

READ MORE

Reviews

‘ನಮ್ದೇಕತೆ’ ಕೃತಿಯ ವಿಮರ್ಶೆ

ಸಮಕಾಲೀನ ತಲ್ಲಣಗಳ ಕುರಿತು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಬರೆದಿರುವ ಲೇಖನಗಳ ಪುಸ್ತಕ ರೂಪವೇ ನಮ್ಮೇಕತೆ, ಸಂಗತಿ ಯಾವುದೇ ಇರಬಹುದು ಅದರ ಬಗೆಗೆ ಅತ್ಯಂತ ಆಳವಾಗಿ, ವಿಸ್ತ್ರತವಾಗಿ ಲೇಖಕರು ಪರಿಚಯಿಸುತ್ತಾ ಹೋಗುತ್ತಾರೆ. ಇವರು ಹೇಳುವ ಹೊಸ, ಹೊಸ ಸಂಗತಿಗಳು ದುತ್ತೆಂದು ಎದುರಾಗಿ ಓದುಗನನ್ನು ಬೆಚ್ಚಿಬೀಳಿಸುವುದರಲ್ಲಿ ದೇಹವಿಲ್ಲ. ಬೆಚ್ಚಿ ಬೀಳಿಸುವುದರ ಜೊತೆಗೆ ತನೆಗೆ ಹಚ್ಚುತ್ತವೆ, ಪರಿಹಾರ ಸೂಚಿಸುತ್ತವೆ.

(ಕೃಪೆ ; ಹೊಸ ಪುಸ್ತಕ (ಸಮಾಜಮುಖಿ)

Related Books