ಡಾ. ಲಕ್ಷ್ಮಿಶಂಕರ ಜೋಶಿ ಅವರ ’ನಾದದ ಬೆನ್ನೇರಿ’ ಕೃತಿ ಅಂಕಣ ಬರೆಹದ ಸಹಜ ಶೈಲಿ ಹಾಗೂ ಸಂಗೀತದ ಮೃದು ಸಂವೇದನೆಯನ್ನು ಒಳಗೊಂಡಿದೆ. ಸಂಗಿತ ಮತ್ತು ಮಹಿಳೆ, ಸಂಗೀತ ಮತ್ತು ಸಾಹಿತ್ಯ, ಸಾರ್ಥಕ ಸಂಗೀತ, ದೊರಕಿದಾ ಗುರು ದೊರಕಿದಾ, ವಸಂತ ನಗರದಲ್ಲಿ ಬಸಂತ ರಾಗ, ಕಲಬುರಗಿ ಜಿಲ್ಲೆಯಲ್ಲಿ ಹಿಂದೂಸ್ತಾನಿ ಸಂಗೀತ ಸೇರಿದಂತೆ ಒಟ್ಟು 18 ಲೇಖನಗಳಿವೆ.
ಲಕ್ಷ್ಮಿಶಂಕರ ಜೋಷಿ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಮಣ್ಣೂರಿನವರು. ಗದಗ ಕೆ.ಎಲ್.ಇ ಸಂಸ್ಥೆಯ ಮಹಿಳಾ ಕಾಲೇಜಿನಿಂದ ಪದವಿ, ಕರ್ನಾಟಕ ವಿ.ವಿ.ಯಿಂದ ಎಂ.ಎ.(ಕನ್ನಡ), ಗುಲಬರ್ಗಾ ವಿ.ವಿ.ಯಿಂದ ಸಂಗೀತದಲ್ಲಿ ಎಂ.ಎ, ಹಾಗೂ ಕರ್ನಾಟಕದಲ್ಲಿ ಹಿಂದೂ ಸ್ತಾನಿ ಸಂಗೀತ: ಒಂದು ಅಧ್ಯಯನ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದಿದ್ದಾರೆ. ಎರಡು ಪ್ರಬಂಧಗಳ ಸಂಕಲನ, ಅಂಕಣ ಬರೆಹಗಳ ಒಂದು ಕೃತಿ, ವೈದ್ಯ ಶಿರೋಮಣಿ-ಕೃತಿಯನ್ನು ಸಂಪಾದಿಸಿದ್ದಾರೆ. ಗುಲಬರ್ಗಾ ವಿ.ವಿ. ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿರುವ ಅವರು, ಪ್ರಸಾರಾಂಗದಿಂದ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಾರಥಿ, ಸ್ವರ ಮಾಧುರಿ ಸೇರಿದಂತೆ ಇತರೆ ಪ್ರಶಸ್ತಿಗಳು ಸಂದಿವೆ. ಸಂಗೀತದಂತೆ ...
READ MORE