ಲೇಖಕ ಸಿ.ಆರ್. ಸತ್ಯ ಅವರ ಇತಿಹಾಸ ಸಂಬಂಧಿತ ಅನ್ವೇಷಣೆಯುಳ್ಳ ಲೇಖನಗಳ ಸಂಗ್ರಹ "ಅಳಿವಿಲ್ಲದ ಸ್ಥಾವರ". ಇಂಗ್ಲಿಷ್ ಕೃತಿಯ ರೂಪಾಂತರವಾದ ಈ ಕೃತಿಯಲ್ಲಿ ತಿರುವನಂತಪುರ ದೇವಸ್ಥಾನದ ಇತಿಹಾಸ , ಪುನರ್ ನಿಮಾ೯ಣ, ಅದರ ಕಾರಣಗಳು, ಕಲ್ಲಿನ ಗೋಡೆಗಳ ತಾಂತ್ರಿಕ ಅನ್ವೇಷಣೆ ಮತ್ತು ರೋಚಕ ಕಥೆಗಳನ್ನು ಹೊಂದಿದೆ. ಇದಕ್ಕೆ ಮುನ್ನುಡಿಯನ್ನು ದಿವಂಗತ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಮ್ ಅವರು ಬರೆದಿದ್ದು, ಅದರ ಕನ್ನಡನುವಾದವನ್ನು ಮಾಡಲಾಗಿದೆ. ಅವರು ಹೇಳುವಂತೆ ಇದು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಚೀನ ಶಾಸ್ತ್ರಜ್ಞರು, ವಿದ್ವಾಂಸರು ಸಹ ಓದಲೇ ಬೇಕಾದ ಪುಸ್ತಕ ಎಂದಿದ್ದಾರೆ.
2012ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ 2014ರಲ್ಲಿ ಎರಡನೇ ಮುದ್ರಣ ಹಾಗೂ 2015ರಲ್ಲಿ ಮೂರನೇ ಮುದ್ರಣ ಕಂಡಿದೆ.
ಹಿರಿಯ ತಂತ್ರಜ್ಞ ಸಿ.ಆರ್. ಸತ್ಯ ಅವರು ವೃತ್ತಿಪರವಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಿಣಿತರು. ಐವತ್ತು ವರ್ಷಗಳಿಗೂ ಮೇಲ್ಪಟ್ಟು ಇವರು ಈ ಕ್ಷೇತ್ರದಲ್ಲಿ ಇಸ್ರೋ ಮತ್ತು ಟಾಟಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇವರು ಬರೆದಿರುವ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳು, ಮೈಸೂರು ವಿಶ್ವ ವಿದ್ಯಾಲಯದ ವಿಶ್ವಕೋಶದಲ್ಲಿ, ರಕ್ಷಣಾ ಇಲಾಖೆಯ ಪ್ರಕಟಣೆಗಳಲ್ಲಿ ವಿಜ್ಞಾನ ಲೋಕ ಹಾಗೂ ಉತ್ಥಾನ ಇಂತಹ ನಿಯತಕಾಲಿಕಗಳಲ್ಲಿ ಮತ್ತು ವೈಜ್ಞಾನಿಕ ಲೇಖನ ಸಂಕಲನಗಳ ಪುಸ್ತಕಗಳಲ್ಲಿ ಕಾಣಬಹುದು. ಸತ್ಯ ಅವರು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಇಲ್ಲಿ ವ್ಯಕ್ತಿ ಚಿತ್ರಗಳಿವೆ, ಜೀವನಾನುಭವಗಳಿವೆ, ಹಾಸ್ಯ ...
READ MORE