‘ಕನ್ನಡ ಸಾಹಿತ್ಯ ಪ್ರತಿಭೆ ಮತ್ತು ಪ್ರಭುತ್ವ’ 1600-1900 ಲೇಖಕಿ ಬಿ.ಯು. ಸುಮಾ ಅವರ ಕೃತಿ. ಈ ಕೃತಿಗೆ ಡಾ.ಶ್ರೀಕಂಠ ಕೂಡಿಗೆ, ಹಾಗೂ ಪ್ರೊ. ತಾಳ್ತಜೆ ವಸಂತಕುಮಾರ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಕನ್ನಡ ಸಾಹಿತ್ಯ ಪ್ರತಿಭೆ ಮತ್ತು ಪ್ರಭುತ್ವ: 1600-1900 ಕಾಲಾವಧಿಯ ಕನ್ನಡ ನಾಡಿನ ಸಂಸ್ಕೃತಿ ಮತ್ತು ಅಧಿಕಾರದ ಸಂಬಂಧದ ಸ್ವರೂಪವನ್ನು ವಿಶ್ಲೇಷಿಸುತ್ತದೆ. ಒಂದು ಸಂಸ್ಕೃತಿಯ ಅಖಂಡವಲ್ಲದ, ಭಿನ್ನ ಆಕೃತಿಗಳಲ್ಲಿ ಅಭಿವ್ಯಕ್ತಿಗೊಳ್ಳುವ ಸಮುದಾಯದ ಆಶಯಗಳನ್ನು ಸಂಕಥನ ರೂಪವಾಗಿ ವೈಯಕ್ತಿಯ ಪ್ರತಿಭೆ ನಿರ್ವಚಿಸುತ್ತದೆ. ಅದನ್ನು ಪ್ರಭುತ್ವ ನಿಯಂತ್ರಿಸುವ ವಿಭಿನ್ನ ವಿನ್ಯಾಸಗಳನ್ನು, ಕಾಲ, ವ್ಯಕ್ತಿ, ಕೃತಿಗಳು ಕಟ್ಟಿಕೊಡುವ ಸತ್ಯಗಳನ್ನು ಏಕಘನಾಕೃತಿಯ ರೀತಿಯಲ್ಲಿ ಅಲ್ಲದೆ, ಬಹುಕೇಂದ್ರಿತ ಚಿಂತನೆಗಳಲ್ಲಿ ಈ ಮಹಾಪ್ರಬಂಧವನ್ನು ರೂಪಿಸಲಾಗಿದೆ ಎಂದಿದ್ದಾರೆ ಶ್ರೀಕಂಠ ಕೂಡಿಗೆ.
ಬೆಂಗಳೂರಿನಲ್ಲಿ 1967ರ ನವೆಂಬರ್ 7 ರಂದು ಜನಿಸಿದ ಸುಮಾ ಅವರು ಮೂಲತಃ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಭೂಪಸಂದ್ರದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (1990 ಕನ್ನಡ ಎಂ.ಎ.) ಪಡೆದು, 1992 ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಕಣ ಇಲಾಖೆಗೆ ಉಪನ್ಯಾಸಕರಾಗಿ ನೇಮಕ ಹೊಂದಿದರು. 2007ರಲ್ಲಿ 'ಕನ್ನಡ ಸಾಹಿತ್ಯ ಪ್ರತಿಭೆ ಮತ್ತು ಪ್ರಭುತ್ವ : 1600-1900' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದರು. ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2008ರಲ್ಲಿ ಇವರು ಸಂಪಾದಿಸಿದ 'ಡಾ.ಬಿ.ಆರ್.ಅಂಬೇಡ್ಕರ್ -ವರ್ತಮಾನದೊಂದಿಗೆ ...
READ MORE