ಡಾ. ಟಿ.ಡಿ. ರಾಜಣ್ಣ ತಗ್ಗಿ ಅವರ ಸಂಶೋಧನೆ ಮತ್ತು ವಿಮರ್ಶಾ ಲೇಖನಗಳ ಸಂಕಲನ ಸಿರಿಗನ್ನಡಿ. ಕೃತಿಯ ಕುರಿತು ಬರೆಯುತ್ತಾ ಸಿರಿಗನ್ನಡಿ ಕೃತಿಯು ನಾನು 2008 ರಿಂದ ಇದುವರೆಗೂ ಬರೆದ ಸಂಶೋಧನಾ ಮತ್ತು ವಿಮರ್ಶಾ ಲೇಖನಗಳ ಸಂಕಲನ. ಈ ಸಂಕಲನದಲ್ಲಿ ಒಟ್ಟು ಐವತ್ತಾರು ಲೇಖನಗಳಿದ್ದು ಅವುಗಳನ್ನು ಶಾಸನ, ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಜಾನಪದ, ಭಾಷೆ, ಸಂಕೀರ್ಣ ಎಂದು ವಸ್ತು-ವಿಷಯದ ದೃಷ್ಟಿಯಿಂದ ಏಳು ಭಾಗಗಳನ್ನಾಗಿ ವರ್ಗೀಕರಿಸಿಕೊಂಡಿರುವೆ ಎಂದಿದ್ದಾರೆ ಲೇಖಕ ಟಿ.ಡಿ. ರಾಜಣ್ಣ ತಗ್ಗಿ. ಹಾಗೇ ಶಾಸನಗಳು ಪ್ರಾಚೀನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸ ನಿರ್ಮಾಣಕ್ಕೆ ಅಧಿಕೃತ ದಾಖಲೆಗಳೆಂಬುದನ್ನು ಮರೆಯುವಂತಿಲ್ಲ. ಇವುಗಳ ಮೂಲಕ ಅಂದಿನ ಭಾಷೆ, ಲಿಪಿ, ಧರ್ಮ, ಪ್ರಭುತ್ವ, ವೀರ-ಪರಂಪರೆ, ಜೊತೆಗೆ ಅಂದಿನ ಸಂಪ್ರದಾಯ ಮುಂತಾದವುಗಳನ್ನು ಅರಿಯಲು ಸಾಧ್ಯವಾಗುತ್ತದೆ. ಶಾಸನಗಳಿಂದ ಇತಿಹಾಸ ನಿರ್ಮಾಣ ಹೇಗೆ ಸಾಧ್ಯವೊ ಹಾಗೆಯೇ ಸಾಹಿತ್ಯದ ಆಂಶಿಕ ಚರಿತ್ರಾಯ ನಿರ್ಮಾಣವೂ ಸಾಧ್ಯ. ಸಾಹಿತ್ಯದ ಮೂಲಚೂಲವನ್ನು ಅರಿಯಲು ಶಾಸನಗಳು ನಮಗೆ ಅನೇಕ ಆಕರಗಳನ್ನು ಒದಗಿಸುತ್ತವೆ. ಇಂತಹ ಸಾಹಿತ್ಯಿಕ ಅಂಶಗಳನ್ನು ಕಂಡರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಶಾಸನ ಕವಿಗಳು ಮತ್ತು ಲಿಪಿಕಾರರು. ಈ ಶಾಸನ ಕವಿ ಮತ್ತು ಲಿಪಿಕಾರರ ಅಧ್ಯಯನವೂ ತುಂಬ ಉಪಯುಕ್ತವಾದದು ಎಂದಿದ್ದಾರೆ. ಪ್ರಾಚೀನ ಕಾಲದ ರಾಜರ ಶೌರ್ಯಕ್ಕೆ ಮತ್ತು ಸಾಮ್ರಾಜ್ಯ ವಿಸ್ತರಣೆಗೆ ಕೊಡುತ್ತಿದ್ದ ಆದ್ಯತೆಯಷ್ಟೇ ಪ್ರಮಾಣದಲ್ಲಿ ಔದಾರ್ಯದ ಗುಣಗಳಿಗೂ ಪ್ರಾಮುಖ್ಯತೆ ಕೊಡುತ್ತಿದ್ದರು. ಅಂತೆಯೇ ಸಹಬಾಳ್ವೆ, ಸಹಿಷ್ಣುತೆ ಮುಂತಾದವನ್ನೂ ತಮ್ಮ ಬದುಕಿನ ಮತ್ತು ಆಡಳಿತದ ಭಾಗವಾಗಿ ಕಾಲಕಾಲಕ್ಕೆ ಅಳವಡಿಸಿಕೊಳ್ಳುತ್ತ ಬಂದಿರುವುದೂ ಅಷ್ಟೇ ಮುಖ್ಯವಾಗಿ ಕಂಡುಬರುತ್ತದೆ. ರಾಜರು ಎಷ್ಟೇ ಯುದ್ಧ ವೈರತ್ವವನ್ನು ಪ್ರತಿಪಾದಿಸುತ್ತ ಬಂದರೂ ಔದಾರ್ಯಗುಣಗಳ ಜೊತೆಗೆ ಮಾನವತಾವಾದ ಎನ್ನಬಹುದಾದ ಸಹಿಷ್ಣುತೆಯೂ ಅವರಲ್ಲಿ ಸದಾ ಜಾಗೃತವಾಗಿತ್ತು. ಇಂಥ ಸಹಿಷ್ಣುತೆಯು ಶಾಸನಗಳಲ್ಲಿ ಹೇಗೆಲ್ಲ ವ್ಯಕ್ತವಾಗಿದೆ ಎಂಬುದನ್ನು ಇದರಲ್ಲಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.
ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...
READ MORE