ಲೇಖಕ, ಪತ್ರಕರ್ತ ಅನಂತ ಹುದೆಂಗಜೆ ಅವರು ಜನಸಾಮಾನ್ಯರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸರಳ ಭಾಷೆ, ಶೈಲಿಯಲ್ಲಿ ಬರೆದಿರುವ ಪುಸ್ತಕವೇ ನಿಮಗೆಷ್ಟು ಹಣ ಬೇಕು?. ‘ಕನ್ನಡ ಮಾಣಿಕ್ಯ’ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳ ಸಂಕಲನವೇ ಇದಾಗಿದೆ. ಇದೂ ಕೂಡ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರದ ವಿಚಾರಗಳ ಕುರಿತ ಪುಸ್ತಕವಾಗಿದೆ. ಈ ಪುಸ್ತಕವನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಹಣವನ್ನು ಮನುಷ್ಯ ಮಾಡುವುದು ಮುಖ್ಯವಲ್ಲ; ಅದರ ಸದ್ಬಳಕೆ ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಚಿತ್ರಣ ಹಾಗೂ ಜ್ಞಾನ ನಮಗೆ ಈ ಪುಸ್ತಕದಿಂದ ಲಭಿಸುತ್ತದೆ.
ಅನುವಾದಕ, ಲೇಖಕ ಅನಂತ ಹುದೆಂಗಜೆ ಮೂಲತಃ ಕಾರ್ಕಳ ತಾಲೂಕಿನ ಈದು ಗ್ರಾಮದವರು. ಪ್ರಸ್ತುತ ಹುಬ್ಬಳ್ಳಿಯಲ್ಲಿ ವಾಸ್ತವ್ಯ. ವಿದ್ಯಾರ್ಥಿಯಾಗಿದ್ದಾಗಲೇ ಅವರು ಅಂಕಣ, ದೈನಿಕ ಧಾರಾವಾಹಿ ಬರವಣಿಗೆಯಲ್ಲಿ ತಮ್ಮನ್ನ ತೊಡಗಿಸಿಕೊಂಡು, ಪತ್ರಿಕೋದ್ಯಮದಲ್ಲಿ 4ನೇ ರ‍್ಯಾಂಕ್ ಅನ್ನು ಪಡೆದುಕೊಂಡಿದ್ದರು. ಪತ್ರಕರ್ತನಾಗಿ ವೃತ್ತಿ ಜೀವನವನ್ನು ಆರಂಭಿಸಿ ಕನ್ನಡ ಜನಾಂತರಂಗ, ಮಂಜುವಾಣಿ, ಕನ್ನಡಪ್ರಭ ಹಾಗೂ ಉದಯವಾಣಿಯಲ್ಲಿ ಬಹು ಕಾಲ ಕಾರ್ಯನಿರ್ವಹಿಸಿದರು. ಅವರು 15ಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು ಬರೆದಿದ್ದಾರೆ. ಕೃತಿಗಳು: ಇದುವೇ ನಮ್ಮ ಸಂಸ್ಕೃತಿ, ಭಾರತ ಇಸ್ಲಾಂ ಮತ್ತು ಗಾಂಧಿ, ಮೊಗ್ಗು ಅರಳುವ ಹೊತ್ತು, ಎಲ್ಲ ಅವನ ಹೆಸರಿನಲ್ಲೇ, ಮಹಾನಡಾವಳಿ, ಮಾತೃಶ್ರೀ ರತ್ನಮ್ಮ, ವಿಂಶತಿ ಸಂಭ್ರಮ ಇತ್ಯಾದಿ. ...
READ MORE