ಲೇಖಕಿ ಶೈಲಜಾ ಹಾಸನ ಅವರ ಅಂಕಣ ಬರಹಗಳ ಸಂಗ್ರಹ ಬದುಕಿನ ಬೊಗಸೆಯಲ್ಲಿ. ಇದು ಲೇಖಕಿಯ 16ನೆಯ ಕೃತಿಯಾಗಿದೆ. ಇದರಲ್ಲಿ ಇಪ್ಪತ್ತೆಂಟು ಅಂಕಣ ಬರಹಗಳಿದ್ದು, ಒಂದೊಂದೂ ವಸ್ತು ವೈವಿದ್ಯತೆಯಿಂದ ಕೂಡಿದೆ. ಗಂಭೀರ ವಿಚಾರಗಳ ಬಗೆಗೂ ಅವರ ಗಮನ ಹರಿದಿದ್ದು, ಶಿಕ್ಷಣದ ಬಗ್ಗೆ ಅವರ ವಿಚಾರ ಮನನೀಯವಾಗಿದೆ. ಸಮಕಾಲೀನ ವಸ್ತು ವಿಷಯಗಳ ಕುರಿತಾದ ಸಾಮಾಜಿಕ, ಸಾಂಸ್ಕೃತಿಕ ಅನನ್ಯತೆಯನ್ನು ಬಹುಶಿಸ್ತಿನಿಂದ ಲೇಖನದಲ್ಲಿ ವಿವರಿಸಿದ್ದಾರೆ. ಇವು ಸರ್ಕಾರಕ್ಕೆ ಇಲಾಖೆಗಳಿಗೆ ಹಾಗೂ ಸಮಾಜಕ್ಕೆ ಎಚ್ಚರಿಸುವ ಬರಹಗಳಾಗಿವೆ.
ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಎನ್. ಶೈಲಜಾ ಮೂಲತಃ ಹಾಸನದವರು. ಅವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಎಂ.ಎ. ಬಿಎಡ್.ಪದವಿ ಪಡೆದ ಇವರು ಶಾಂತಿಗ್ರಾಮ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ...
READ MORE