‘ಹನಿಗವನ ಏನು? ಏಕೆ ? ಹೇಗೆ ? ಕೃತಿಯು ಎಚ್. ಡುಂಡಿರಾಜ್ ಅವರ ಹನಿಗವನಗಳಿಗೊಂದು ಮಿನಿ ಕೈಪಿಡಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ `ಪ್ರೀತಿ ಮಾಡುವುದು ಮತ್ತು ಕವನ ಬರೆಯುವುದು ನಾವೇ ಕಲಿತುಕೊಳ್ಳಬೇಕಾದ ವಿದ್ಯೆ ಎಂದು ನನ್ನ ಭಾವನೆ. ಆದ್ದರಿಂದಲೇ ನಾನೊಮ್ಮೆ ಹೀಗೊಂದು ಹನಿಗವನ ಬರೆದಿದ್ದೆ. ಪ್ರೀತಿಸುವುದು ಹೇಗೆ ಎಂದು ಕಲಿಸಬೇಕಿಲ್ಲ ಯಾರೂ ಲವ್ ವಿಷಯದಲ್ಲಿ ನಾವೆಲ್ಲರೂ ಏಕ ಲವ್ಯರು! ಹಾಗಾದರೆ, ಈ ಪುಸ್ತಕ ಏಕೆ ಅನ್ನುವಿರಾ? ಅದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ಹನಿಗವನ ಬರೆಯಲು ಆಸಕ್ತಿ ಇರುವವರಿಗೆ ಮತ್ತು ಈಗಾಗಲೇ ಬರೆಯುತ್ತಿರುವ ಹೊಸಕವಿಗಳಿಗೆ ಉಪಯೋಗವಾಗುವಂಥ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿಸುವುದು. ಬರೆಯುವವರಿಗೆ ಮಾತ್ರವಲ್ಲದೆ ಹನಿಗವನಗಳ ಓದುಗರಿಗೆ ಅವುಗಳ ಸ್ವಾರಸ್ಯವನ್ನು ಇನ್ನಷ್ಟು ಚೆನ್ನಾಗಿ ಅಸ್ವಾದಿಸಲು ಅನುಕೂಲವಾಗುವಂಥ ಸಂಗತಿಗಳನ್ನು ಚರ್ಚಿಸುವುದು. ಹನಿಗವನಗಳ ಬಗ್ಗೆ ಮಾತನಾಡುವವರಿಗೆ ಮತ್ತು ಲೇಖನ ಬರೆಯುವವರಿಗೆ ಅಗತ್ಯವಾದ ಮಾಹಿತಿ ಒಂದೆಡೆ ಸಿಗುವಂತೆ ಮಾಡುವುದು ಎನ್ನುವುದನ್ನು ಈ ಕೃತಿ ವಿಶ್ಲೇಸಿಸುತ್ತದೆ.
ಭಾಗ-1 : ಹನಿಗವನಗಳ ವಿವರಣೆ, ಸಂಕ್ಷಿಪ್ತ ಇತಿಹಾಸ, ಪ್ರಸ್ತುತತೆ :ಹನಿಗವನ ಮತ್ತು ಚುಟುಕುಗಳಿಗೆ ಏನು ವ್ಯತ್ಯಾಸ?, ಹನಿಗವನದಲ್ಲಿ ಎಷ್ಟು ಸಾಲುಗಳಿರಬೇಕು?, ಹನಿಗವನ ಕಾವ್ಯದ ಹೊಸ ಪ್ರಕಾರವೆ?, ಹೊಸಗನ್ನಡದ ಹನಿಗವನಗಳ ವಿವಿಧ ಮಾದರಿಗಳು, ಮಿಶ್ರ ಶೈಲಿಯ ಹೊಸ ಸಂವೇದನೆಯ ಹನಿಗವನಗಳು, ಹನಿಗವನಗಳ ಹೆಚ್ಚಿದ ಜನಪ್ರಿಯತೆ, ಇಂದಿನ ಜೀವನ ಶೈಲಿಗೆ ಹೊಂದುವ ಹನಿಗವನ, ಹನಿಗವನಗಳ ಶಕ್ತಿ ಹಾಗೂ ಉಪಯುಕ್ತತೆ, ಹನಿಗವನಗಳ ಇತಿಮಿತಿ, ದೌರ್ಬಲ್ಯ, ಹನಿಗವನ ಹಾಗೂ ಇಡಿಗವನಗಳ ಸಂಬಂಧ. ಭಾಗ-2 : ಹನಿಗವನಗಳ ವಸ್ತು ವೈವಿಧ್ಯ, ಹನಿಗವನ ಬರೆಯುವುದು ಹೇಗೆ?, ಸ್ಫೂರ್ತಿ ಎಂದರೇನು?, ಕವಿಗಳಿಗೆ ಸ್ಫೂರ್ತಿ ಹೇಗೆ ಬರುತ್ತದೆ?, ಆಶುಕವನಗಳು, ಕವನಕ್ಕೆ ವಸ್ತು/ವಿಷಯ ಎಲ್ಲಿ ಸಿಗುತ್ತದೆ?, ವರ್ತಮಾನಕ್ಕೆ ಸ್ಪಂದನ, ಭಾವನೆಗಳ ಲೋಕದಲ್ಲಿ, ಚರಿತ್ರೆ, ಪುರಾಣ, ಅಧ್ಯಾತ್ಮ, ತತ್ವಜ್ಞಾನ, ಒಂದೇ ವಸ್ತುವನ್ನು ಕುರಿತ ಹನಿಗವನಗಳು, ವಯಸ್ಕರ ಶಿಕ್ಷಣದ ಪಠ್ಯವಾಗಿ ಹನಿಗವನ, ಮಕ್ಕಳಿಗಾಗಿ ಹನಿಗವನಗಳು. ಭಾಗ-3 : ಹನಿಗವನಗಳ ವಿನ್ಯಾಸ/ತಂತ್ರ: ಪ್ರಾಸೋಲ್ಲಾಸ, ಪ್ರಾಸಾನುಪ್ರಾಸಗಳ ಚಕಮಕಿ, ಕಿರುಗವನಗಳಲ್ಲಿ ಪನ್ ಮಾಡುವ ಪಂಡಿತರು, ಕಾವ್ಯ ಕ್ರೀಡೆ/ಪದಗಳ ಆಟ, ರಮ್ಯ ವಿರೋಧಿ, ನಿಲುವು, ಧ್ವನಿ, ಸೂಚ್ಯಾರ್ಥ, ಅನ್ಯೋಕ್ತಿ, ವಿಪರ್ಯಾಸ/ವೈರುಧ್ಯ, ಅನಿರೀಕ್ಷಿತ ಅಂತ್ಯ ಅಥವಾ ಪಂಚ್, ಉಪಮೆ/ಹೋಲಿಕೆ/ರೂಪಕ, ಕಲ್ಪನೆಗಳ ತಾಜಾತನ, ಗಾದೆ/ಒಗಟುಗಳಂಥ ಹನಿಗವನಗಳು, ಕಥನ ಕವನಗಳು, ಅಣಕ/ಅನುಕರಣೆ/ಪ್ರೇರಣೆ/ಪ್ರಭಾವ, ಅನುವಾದ, ರೂಪಾಂತರ, ಹನಿಗವನಕ್ಕೆ ಶೀರ್ಷಿಕೆ ಬೇಕೆ?, ಹನಿಗವನವನ್ನು ವಾಚಿಸುವುದು ಹೇಗೆ?. ಭಾಗ-4 : ಯಾವುದು ಒಳ್ಳೆಯ ಕವಿತೆ?, ಏನು ಮಾಡಬೇಕು?, ಏನು ಮಾಡಬಾರದು? ಹೀಗೆ ಇವೆಲ್ಲಾ ವಿಚಾರಗಳು ಈ ಕೃತಿಯಲ್ಲಿವೆ’ ಎಂದು ಲೇಖಕರು ಮಾಹಿತಿ ನೀಡಿದ್ದಾರೆ. .
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE