ಲೇಖಕ ನಾರಾಯಣ ಶೇವಿರೆ ಅವರ ವಿಮರ್ಷಾತ್ಮಕ ಕೃತಿ ʻಬಿಡುಗಡೆಯ ಮಿಂಚುʼ. ಪುಸ್ತಕವು ಭಾರತದ ಇತಿಹಾಸದಲ್ಲಿ ನಡೆದುಹೋದ ಘಟನೆಗಳು, ಅದರಿಂದ ಪಡೆದ ಹಾಗೂ ಕಳೆದುಕೊಂಡ ಮುಖ್ಯ ಸಂಗತಿಗಳ ಬಗ್ಗೆ ವಿಮರ್ಶಿಸುತ್ತದೆ. ಅಂತೆಯೇ, 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಲಿಲ್ಲ, ಬದಲಾಗಿ ಬಿಡುಗಡೆ ಆಗಿದ್ದು, ನಿಜವಾದ ಸ್ವಾತಂತ್ರ್ಯ ಪಡೆಯಲು ಭಾರತದ ಮುಂದೆ ಇರುವ ಹಲವಾರು ಅಡ್ಡಿ- ಆತಂಕಗಳು, ನಿಜ ಸ್ವಾತಂತ್ರ್ಯ ಪಡೆದರೆ ನಮ್ಮ ದೇಶ ಜಗತ್ತಿನಲ್ಲೇ ಹೇಗೆ ಭಿನ್ನವಾಗಿ ನಿಲ್ಲಬಹುದು ಹೀಗೆ ಹಲವಾರು ವಿಚಾರಗಳನ್ನು ಇತಿಹಾಸ- ವರ್ತಮಾನಗಳ ಹಿನ್ನೆಲೆಯಲ್ಲಿ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಗಾಂಧೀಜಿಯವರ ಅಹಿಂಸಾವ್ರತ, ಅಸಹಕಾರ ಚಳವಳಿಯನ್ನೂ ಸಹ ಇಲ್ಲಿ ಕಟುವಾಗಿ ವಿಮರ್ಶಿಸಲಾಗಿದೆೆ.
ಲೇಖಕ ನಾರಾಯಣ ಶೇವಿರೆ ಮೂಲತಃ ಮಂಗಳೂರಿನವರು. ಪ್ರಸ್ತುತ, ಹರಿಹರಪುರದಲ್ಲಿ ವಾಸವಾಗಿದ್ದಾರೆ. ಬರವಣಿಗೆ, ಓದು ಅವರ ಆಸಕ್ತಿ ಕ್ಷೇತ್ರ. ಕೃತಿಗಳು :ಅವಿಖ್ಯಾತ ಸ್ವರಾಜ್ಯ ಕಲಿಗಳು. ...
READ MORE