‘ವಿಮೋಚನೆಯ ಹಾದಿಯಲ್ಲಿ ಮಹಿಳಾಧ್ವನಿ’ ಲೇಖಕ ನಾ. ದಿವಾಕರ ಅವರ ಲೇಖನ ಸಂಕಲನ. ಈ ಕೃತಿಗೆ ಆರ್. ಇಂದಿರಾ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ನಾ. ದಿವಾಕರ ಅವರ ವಿಮೋಚನೆಯ ಹಾದಿಯಲ್ಲಿ ಮಹಿಳಾ ಧ್ವನಿ ಯಲ್ಲಿರುವ ಲೇಖನಗಳನ್ನು ಓದುತ್ತಾ ಹೋದಾಗ, ಮಹಿಳೆಯರ ಬದುಕಿನ ವಾಸ್ತವಗಳನ್ನು ದಾಖಲಿಸುವಾಗ ಆ ಬರಹಗಳು ಅವರ ಸಂಘರ್ಷಗಳಿಗೆ ಧ್ವನಿಯಾಗುವಂತಿರಬೇಕು ಎಂಬ ಮಾತು ನನಗೆ ನೆನಪಿಗೆ ಬರುತ್ತದೆ. ಸ್ವತಃ ಪ್ರಶ್ನೆ ಮತ್ತು ಪ್ರತಿಭಟನೆಗಳೆರಡನ್ನೂ ತಮ್ಮ ಬದುಕಿನ ಭಾಗವನ್ನಾಗಿಸಿಕೊಂಡಿರುವ ನಾ. ದಿವಾಕರ ಅವರ ಬರಹಗಳಲ್ಲಿ ಲಿಂಗಾಧಾರಿತ ಅನ್ಯಾಯಗಳ ವಿರುದ್ಧ ಆಕ್ರೋಶವೂ ಇದೆ. ನ್ಯಾಯಕ್ಕೆ ಬದ್ಧವಾದ ಸಮಾಜದ ನಿರ್ಮಾಣ ಮಾಡಬೇಕೆಂಬ ಆಶಯವೂ ಇದೆ ಎಂದಿದ್ದಾರೆ ಇಂದಿರಾ. ಹಾಗೇ ಈ ಪುಸ್ತಕದಲ್ಲಿ ನನ್ನ ಗಮನವನ್ನು ಸೆಳೆದ ಮತ್ತೊಂದು ವಿಷಯವೆಂದರೆ ಮಹಿಳೆಯರ ಬದುಕನ್ನು ತಟ್ಟಿದ ಹಾಗೂ ತಟ್ಟಬಹುದಾದ ಅನೇಕ ವಿಚಾರಗಳನ್ನು ಲೇಖಕರು ಜಾಗತಿಕ ನೆಲೆಗಟ್ಟಿನಲ್ಲಿ ವಿಶ್ಲೇಷಣೆಗೆ ಒಳಪಡಿಸಿರುವುದು, ಮಹಿಳಾ ಶೋಷಣೆ ಯಾವುದೇ ಒಂದು ಪ್ರದೇಶ ಅಥವಾ ಗುಂಪಿಗೆ ಸೀಮಿತವಾದುದಲ್ಲ. ಅದು ಕಾಲ-ದೇಶಗಳ ಎಲ್ಲೆಗಳನ್ನು ಮೀರಿ ನಿಂತಂತಹುದು ಎಂಬ ಸತ್ಯವನ್ನು ಇಲ್ಲಿ ಚರ್ಚೆಗೆ ಒಳಪಟ್ಟಿರುವ ವಿವಿಧ ವಿಚಾರಗಳು ಹಾಗೂ ಘಟನೆಗಳು ಎತ್ತಿ ಹಿಡಿಯುತ್ತವೆ ಎಂದಿದ್ದಾರೆ.
ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...
READ MORE