‘ಉಪಾಧ್ಯೆ ಸ್ಮೃತಿ ಸಂಚಯ’ ಡಾ.ಹಾ.ಮಾ. ನಾಯಕ ಅವರು ಪ್ರಧಾನ ಸಂಪಾದಕರಾಗಿದ್ದು, ಪಂ.ಪ. ನಾಗರಾಜಯ್ಯ ಅವರು ಸಂಪಾದಿಸಿರುವ ಕೃತಿ. ಉಪಾಧ್ಯೆ ಸ್ಮೃತಿ ಸಂಚಯದಲ್ಲಿ ನಾಡಿನ ಶ್ರೇಷ್ಠ ವಿದ್ವಾಂಸರು ಡಾ. ಉಪಾಧ್ಯೆ ಅವರ ವ್ಯಕ್ತಿತ್ವವನ್ನೂ, ಪಾಂಡಿತ್ಯವನ್ನೂ ಕುರಿತು ಬರೆದಿರುವ ಮೂವತ್ತೇಳು ಲೇಖನಗಳು ಸಮಾವೇಶಗೊಂಡಿವೆ. ಅನ್ಯಭಾಷೆಯಲ್ಲಿ ಬರೆದಿರುವ ಲೇಖನಗಳನ್ನೂ ಕನ್ನಡಕ್ಕೆ ಅನುವಾದಿಸಿ ಸೇರಿಸಲಾಗಿದೆ.
ತಮ್ಮ ಅಂಕಣ ಬರಹಗಳಿಂದ ಪ್ರಸಿದ್ಧರಾಗಿದ್ದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಸಾಹಿತ್ಯ- ಸಾಂಸ್ಕೃತಿಕ ಲೋಕದ ದೊಡ್ಡ ಹೆಸರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931ರ ಸೆಪ್ಟೆಂಬರ್ 12ರಂದು ಜನಿಸಿದರು. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ಭಾಷಾವಿಜ್ಞಾನದಲ್ಲಿ ಎಂ.ಎ. (1958)ಪದವಿಯನ್ನು ಪಡೆದರು. ತುಮಕೂರಿನಲ್ಲಿ ಕನ್ನಡ ಅಧ್ಯಾಪಕ (1955) ಆಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದ ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿ (1984) ...
READ MORE