ಡಾ. ವಿಷ್ಣುವರ್ಧನ್ ಇಲ್ಲದ ಆ ಎರಡು (30-12-2009 ರಿಂದ 30-12-2011ರವರೆಗೆ ) ವರ್ಷಗಳ ಕನ್ನಡ ಚಲನಚಿತ್ರ ರಂಗದ ಬೆಳವಣಿಗೆಗಳನ್ನು ವಿಶ್ಲೇಷಿಸಿದ ಕೃತಿ-ಸಿಂಹ ಘರ್ಜನೆ. ಇದನ್ನು ಭಾವನಾತ್ಮಕವಾಗಿ ‘ಸಂಪತ್ತು ಇಲ್ಲದ ನಾಡು’ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ಈ ಮಣ್ಣಿನ ಹೆಮ್ಮೆಯ ಮಗನಿವನು, ಕನ್ನಡಾಂಬೆಯ ಪ್ರೇಮದ ಕುಡಿ ಇವನು, ಬಡವರ ಕಣ್ಣಿವನು, ಧರ್ಮಕೆ ದೊರೆ ಇವನು, ನ್ಯಾಯಕೆ ನೆರಳಿವನು, ನೆನೆದವರ ಸಲಹುವನು, ನಮ್ಮ ಡಾ. ವಿಷ್ಣುವರ್ಧನನು’ ಎಂದೂ ಹೇಳಿದ್ದಾರೆ. ಇಂತಹ ನಟ ಇಲ್ಲದ ಚಿತ್ರರಂಗ ಹೇಗೆ ನರಳಿತು ಎಂಬ ವಿಶ್ಲೇಷಣೆಯೂ ಇಲ್ಲಿದೆ.
ಜನಾರ್ದನರಾವ್ ಸಾಳಂಕೆ ಅವರು ಪತ್ರಕರ್ತರು ಹಾಗೂ ಛಾಯಾಗ್ರಾಹಕರು. ಎಂ.ಎ (ಆರ್ಥಶಾಸ್ತ್ರ) ಹಾಗೂ ಎಂ.ಬಿ.ಎ (ಸಿಸ್ಟಮ್ಸ್) ಪದವೀಧರರು. ಬೆಂಗಳೂರಿನಲ್ಲಿಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ಕೃತಿಗಳು: ಮರೆಯದ ಮಾಣಿಕ್ಯ (ಯಜಮಾನ ಡಾ.ವಿಷ್ಣುವರ್ಧನ್ ಅವರ ಚಿತ್ರಣ) ಸಿಂಹ ಘರ್ಜನೆ (ವಿಷ್ಣುವರ್ಧನ್ ತೀರಿಕೊಂಡ ಮೇಲೆ ನಡೆದ ಎರಡು ವರ್ಷಗಳ ಅವಧಿಯಲ್ಲಿಯ ಬೆಳವಣಿಗೆಗಳು), ಕರುಣಾಮಯಿ (ಡಾ.ವಿಷ್ಣುವರ್ಧನ್ ಅವರ ಕುಟುಂಬ, ಆಪ್ತರು, ಅಭಿಮಾನಿಗಳ ಸಂದರ್ಶನಗಳು), ನಾಗರಹಾವು (ವಿಷ್ಣುವರ್ಧನ್ ಅವರ ಪಾತ್ರದ ವಿಶ್ಲೇಷಣೆ) ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ ಯಶೋಗಾಥೆ. ಪ್ರಶಸ್ತಿ-ಪುರಸ್ಕಾರಗಳು: ಡಾ.ವಿಷ್ಣುವರ್ಧನ್ ಅವರ ಮೇಲಿನ ನಾಲ್ಕೂ ಪುಸ್ತಕಗಳಿಗೆ ಬೆಂಗಳೂರಿನ ವೆಂಕಟಾಪುರದ ಡಾ.ವಿಷ್ಣು ಸೇನಾ ಸಮಿತಿ, ಸನ್ ಸ್ಟಾರ್ ನಾಗರಹಾವು ಡಾ.ವಿಷ್ಣುವರ್ಧನ್ ಕ್ರೀಡಾ ಮತ್ತು ಸಾಂಸ್ಕೃತಕ ಟ್ರಸ್ಟ್ , ಕಮಲಾನಗರ. ಬಿನ್ನಿಪೇಟೆಯ ಸಾಮ್ರಾಟ್ ಟೀo, ಲಗ್ಗೆರೆ ...
READ MORE