‘ ಅ ಒಳಗಿನ ಬಿಕ್ಕಟ್ಟು’ ಕೃತಿಯು ಜಿ.ಎನ್.ದೇವಿ ಅವರ ಬರಹಗಳ ಸಂಕಲನವಾಗಿದೆ. ಕೆ.ಪಿ. ಸುರೇಶ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯು ಭಾರತದ ಜ್ಞಾನ ಮತ್ತು ಬಿಕ್ಕಟ್ಟುಗಳ ಕುರಿತ ಕೃತಿಯಾಗಿದೆ. ವಸಾಹತುಶಾಹಿ ಮತ್ತು ಜಾತಿ ವ್ಯವಸ್ಥೆ ಭಾರತದ ಜ್ಞಾನ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ಮಾಡಿದ ಪರಿಣಾಮಗಳ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕೃತಿಯ ಮೊದಲ ಅಧ್ಯಾಯದಲ್ಲಿ ಸ್ವಾತಂತ್ರಾನಂತರ ಭಾರತದ ಅಭಿವೃದ್ಧಿ, ಬೆಳವಣಿಗೆಗೆ ಕಾಣಿಕೆ ನೀಡಬಲ್ಲಂತಹ ಶಿಕ್ಷಿತ ಯುವ ಮನಸ್ಸುಗಳನ್ನು ಸೃಷ್ಟಿಸಲು ಬೇಕಾದ ಶೈಕ್ಷಣಿಕ ಪ್ರಕ್ರಿಯೆ ಮತ್ತು ನಿಯಂತ್ರಕ ಸಂಸ್ಥೆಗಳು ಹೇಗೆ ರೂಪ ಪಡೆಯಿತು ಎನ್ನುವುದರ ಕಡೆಗೆ ಲೇಖಕರು ಗಮನ ಕೊಟ್ಟಿದ್ದಾರೆ. ಎರಡನೇ ಅಧ್ಯಾಯದಲ್ಲಿ ಭಾರತೀಯ ತತ್ತ್ವ ಶಾಖೆಗಳಲ್ಲಿ ಜ್ಞಾನವೆಂದರೇನು ಎಂಬ ಗ್ರಹಿಕೆಯ ಬಗ್ಗೆ ಲೇಖಕರು ವಿವರಿಸುತ್ತಾ. ಉಪನಿಷತ್ತುಗಳಿಂದ ಆರಂಭವಾಗಿ ಧಾರ್ಮಿಕೇತರ ದರ್ಶನ ಮೀಮಾಂಸೆಯಿಂದ ಮುಂದುವರಿದು ಬುದ್ಧ, ಜೈನ, ಸೂಫಿ, ಭಕ್ತಿ ಮತ್ತು ಜಾನಪದ ಪರಂಪರೆಗಳನ್ನು ಮುಂದಿಟ್ಟುಕೊಂಡು ಈ ಅಧ್ಯಾಯವನ್ನು ವಿಶ್ಲೇಷಿಸುವುದನ್ನು ಕಾಣಬಹುದಾಗಿದೆ.
©2024 Book Brahma Private Limited.