ಅಪ್ಪನೊಳಗೊಬ್ಬ ಅವ್ವ

Author : ಬಿ.ಜೆ. ಪಾರ್ವತಿ.ವಿ. ಸೋನಾರೆ

Pages 124

₹ 130.00




Year of Publication: 2022
Published by: ಕಪ್ಪಣ್ಣ ಅಂಗಳ
Address: 32 ನೇ ಮುಖ್ಯ ರಸ್ತೆ ಟಿ ಎಂಸಿ ಬಡಾವಣೆ,1ನೇ ಹಂತ , ಜೆ.ಪಿ ನಗರ , ಬೆಂಗಳೂರು- 560078
Phone: 9449022118

Synopsys

ಅಪ್ಪನೊಳಗೊಬ್ಬ ಅವ್ವ ಬಿ.ಜೆ. ಪಾರ್ವತಿ ವಿ. ಸೋನಾರೆ ಅವರ ಕೃತಿಯಾಗಿದೆ. ಸಾಮಾಜಿಕ ಆಗುಹೋಗುಗಳಿಗೆ ಕಣ್ಣು, ಕಿವಿಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟುಕೊಂಡಿದ್ದರಿಂದ ಅಲ್ಲಿನ ತಾರತಮ್ಯ, ಶೋಷಣೆ, ನೋವು, ಆಕ್ರಂದನಗಳು ಇವರ ಮನಸ್ಸನ್ನು ತಟ್ಟಿದವು. ಇದೇ ಇವರ ಪ್ರೇರಣೆ ಎನ್ನಬಹುದು. ತಮ್ಮ ಜೀವನದ ಬವಣೆಗಳು, ಕಷ್ಟ, ಸುಖಗಳೇ ತಮ್ಮ ಗುರುಗಳು ಎನ್ನುತ್ತಾರೆ ಪಾರ್ವತಿ. ನಿಜ, ಇವರಂತಹ ಅನೇಕ ಮಹಿಳಾ ಪ್ರತಿಭೆಗಳು ನಾಡಿನ ಮೂಲೆಮೂಲೆಗಳಲ್ಲಿ ಅಡಗಿಹೋಗುತ್ತಿವೆ. ಇಂತಹ ಮೂಲೆಗುಂಪಾದ ಸಾಹಿತಿ, ಕಲಾವಿದರನ್ನು ಗುರುತಿಸುವ ಕೆಲಸ ಇಂದು ಆಗಬೇಕಿದೆ. ಅವರ ಲೇಖನ, ಕಲಾಕೃತಿಗಳನ್ನು ಎಲ್ಲರೂ ಗಮನಿಸುವಂತೆ ಆಗಬೇಕು. ಇದು ತಕ್ಷಣಕ್ಕೆ ಆಗಿಬಿಡುವ ಕಾರ್ಯವೇನೂ ಅಲ್ಲ ಎಂದಿದ್ದಾರೆ, ಪ್ರಕಾಶಕರ ನುಡಿಯಲ್ಲಿ ಶ್ರೀನಿವಾಸ ಜಿ. ಕಪ್ಪಣ್ಣ.

About the Author

ಬಿ.ಜೆ. ಪಾರ್ವತಿ.ವಿ. ಸೋನಾರೆ

ಬಿ.ಜೆ. ಪಾರ್ವತಿ. ವಿ. ಸೋನಾರೆ ಅವರು ಮೂಲತಃ  ಇವರು  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದ ಹತ್ತಿರವಿರುವ ಕೊಂಕಣಗಾಂವ ಎಂಬ ಗ್ರಾಮದವರು . ತಂದೆ ಜಟಿಂಗರಾಯ ಡಫಳಾಪೂರ ತಾಯಿ ಭೀಮಬಾಯಿ ಡಫಳಾಪೂರ.  ವಿಜಯ ಕುಮಾರ ಸೋನಾರೆಯವರ ಕೈಹಿಡಿದು  ಬೀದರಿನ ವಿಜಯಕಾಲೋನಿಯ ನೆಲೆಸಿದ್ದಾರೆ.  ಇವರು ಅನೇಕ  ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.   ಸಂದ ಪ್ರಶಸ್ತಿ ಪುರಸ್ಕಾರ ,ಸನ್ಮಾನಗಳು ಅನೇಕ. 2011 ರಲ್ಲಿ “ ದ ಬ್ಲೆಂಡ್‌ ಫೇತ್‌” ಕಿರುಚಿತ್ರದ ನಟನೆಗಾಗಿ "excellent actor" ಎಂಬ ಪ್ರಶಸ್ತಿ ದೊರೆತಿದೆ. 2016 ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಕಲಬುರ್ಗಿ ವಿ.ವಿ. "ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ...

READ MORE

Related Books