`ಭಾವ ಭಿತ್ತಿ’ ಕೃತಿಯು ರಾಜಕುಮಾರ ಕುಲಕರ್ಣಿ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ 18 ಲೇಖನಗಳಿವೆ. ಕೃತಿಗೆ ಬೆನ್ನುಡಿ ಬರೆದಿರುವ ಗವಿಸಿದ್ದಪ್ಪ ಪಾಟೀಲ ಅವರು, ‘ಒಂದು ರೀತಿಯ ಸಂಕೀರ್ಣ ಬರಹಗಳನ್ನು ಒಳಗೊಂಡ ಈ ಕೃತಿಯಲ್ಲಿ ಲೇಖಕ ಓದು ಅಧ್ಯಯನದ ಹಿನ್ನೆಲೆಯಲ್ಲಿ ಅರಗಿಸಿಕೊಂಡ ಹಾಗೆ ಲೇಖನಗಳನ್ನು ಬರೆದಿದ್ದಾರೆ. ಕೊನೆಯಲ್ಲಿ ತಮ್ಮ ಬರಹದ ಆಶಯಗಳನ್ನು ಕೊಡುತ್ತಾ ಹೋಗುತ್ತಾರೆ. ಕನ್ನಡ ಭಾಷೆಯ ಆತಂಕಗಳು ಎಂಬ ಶೀರ್ಷಿಕೆಯ ಲೇಖನ ಗಂಭೀರವಾಗಿದೆ. ಅದರಲ್ಲಿ ಅನೇಕ ಮೌಲಿಕವಾದ ಚಿಂತನೆಗಳನ್ನು ಮಾಡಿದ್ದಾರೆ, ಚರ್ಚಿಸಿದ್ದಾರೆ. ಅವುಗಳ ಪರಿಹಾರಕ್ಕಾಗಿ ಪರಿತಪಿಸಿದ್ದಾರೆ. ಇದೇ ರೀತಿ, ಅನೇಕ ಲೇಖನಗಳು ಮಾರ್ಮಿಕವಾಗಿ ಬರೆದಿದ್ದಾರೆ. ಒಟ್ಟಾರೆಯಾಗಿ, ಈ ಕೃತಿಯು ರಾಜಕುಮಾರ ಕುಲಕರ್ಣಿಯವರ ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರ ಕೃತಿಗಳು ಅನಾವರಣ ಮಾಡುವುದರ ಜೊತೆಗೆ ಇಂದಿನ ಪ್ರಸ್ತುತ ದಿನಗಳಲ್ಲಿ ಚರ್ಚೆಗೆ ಒಳಗಾಗಬೇಕಾದ ಹಂತಗಳನ್ನು ದಾಖಲಿಸಿದ್ದಾರೆ. ಈ ಎಲ್ಲಾ ಲೇಖನಗಳು ಆಮೂಲಾಗ್ರವಾಗಿ ವಿಶ್ಲೇಷಣೆ, ವಿಮರ್ಶಾತ್ಮಕ ಮತ್ತು ಪರಿಚಯಾತ್ಮಕವಾಗಿ ಕೂಡಿದವುಗಳಾಗಿವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ರಾಜಕುಮಾರ ಕುಲಕರ್ಣಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಇವರ ಹಲವಾರು ಕಥೆಗಳು ಕರ್ಮವೀರ, ಮಾನಸ, ಸಿಹಿಗಾಳಿ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಕೃತಿಗಳು: ಬೇರಿಗಂಟಿದ ಮರ (ಕಥಾ ಸಂಕಲನ) ...
READ MORE