ಕಾರ್ಮಿಕ

Author : ಹೊ. ಶ್ರೀನಿವಾಸಯ್ಯ

Pages 76

₹ 115.00




Year of Publication: 1983
Published by: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ
Address: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ - 583 276, ಹೊಸಪೇಟೆ(ತಾಲ್ಲೂಕು), ಬಳ್ಳಾರಿ (ಜಿಲ್ಲೆ) ಪ್ರಾದೇಶಿಕ ಕಚೇರಿ ಕನ್ನಡ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ ನಂ. 1, ಹಳೆಯ ಕಾನೂನು ಕಾಲೇಜು ಕಟ್ಟಡ ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ ಬೆಂಗಳೂರು- 560009
Phone: 9449262647/080-22372388

Synopsys

‘ಕಾರ್ಮಿಕ’ ಹೊ. ಶ್ರೀನಿವಾಸಯ್ಯ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಮಾಹಿತಿ ಹೀಗಿದೆ; “ಪ್ರೌಢಶಿಕ್ಷಣದ ಗುರಿಗಳೇ ಬೇರೆ, ಜನಪ್ರಿಯ ಶಿಕ್ಷಣದ ಗುರಿಗಳೇ ಬೇರೆ; ಒಂದರ ಉದ್ದೇಶ ಜ್ಞಾನವನ್ನು ಬೆಳೆಸುವುದು. ಇನ್ನೊಂದರದು ಅದನ್ನು ಹರಡುವುದು ಮತ್ತು ಈಗಾಗಲೇ ತಿಳಿದುಬಂದಿರುವ ವಿಷಯ ಗಳಲ್ಲಿ ಜನರ ಆಸಕ್ತಿಯನ್ನು ಹೆಚ್ಚಿಸುವುದು " ಎಂದು ಲಾರ್ಡ್ ಮಾರ್ಲೆ, 'ಸಾರ್ವಜನಿಕ ಸಂಸ್ಕೃತಿ ' ಎಂಬ ತನ್ನ ಪ್ರಬಂಧವೊಂದರಲ್ಲಿ ಹೇಳಿದ್ದಾನೆ. ಇಂದಿನ ವಿಶ್ವವಿದ್ಯಾನಿಲಯಗಳ ಹೊಣೆಗಾರಿಕೆಗಳಲ್ಲಿ ಅದರಲ್ಲೂ ನಮ್ಮಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಎರಡನೆಯ ಉದ್ದೇಶ ಮೊದಲಿನದರಷ್ಟೇ ಮಹತ್ವವನ್ನು ಪಡೆಯಬೇಕು. ಅಜ್ಞಾನ ತುಂಬಿಕೊಂಡಿರುವ ಸಮಾಜ ಸುತ್ತುವರಿದಿರುವ ಯಾವುದೇ ವಿಶ್ವವಿದ್ಯಾನಿಲಯ ಕಲಿಕೆಯ ಕೇಂದ್ರವಾಗಿ ಊರ್ಜಿತವಾಗಲಾರದು.

ಒಂದು ಕಡೆ ಅದು ಹೊಸ ಅರಿವಿನ ಅನ್ವೇಷಣೆಗೆ ಉತ್ತೇಜನ ಕೊಟ್ಟು ಅವುಗಳನ್ನು ಪ್ರೌಢ ಪ್ರಕಟಣೆಗಳು ಮತ್ತು ಉಪನ್ಯಾಸಗಳ ಮೂಲಕ ಬೆಳಕಿಗೆ ತರಬೇಕು. ಮತ್ತೊಂದು ಕಡೆ, ಯಾವುದೋ ಕಾರಣದಿಂದ ವಿಶ್ವವಿದ್ಯಾನಿಲಯವನ್ನು ಹೊಗಲಾರದ ಜನರಿಗೆ ಅಂಥ ಜ್ಞಾನವನ್ನು ಹಂಚಬೇಕು. ಈ ಉದ್ದೇಶದ ಸಾಧನೆಗಾಗಿ ಮಹತ್ವ ಪೂರಿತವೂ ಆಸಕ್ತಿಕರವೂ ಆದ ವಿವಿಧ ವಿಷಯಗಳನ್ನು ಕುರಿತು ಹೊಸ ಹೊಸ ಪುಸ್ತಕಗಳನ್ನು ನಮ್ಮ ವಿಶ್ವವಿದ್ಯಾನಿಲಯಗಳು ಪ್ರಕಟಿಸ ಬೇಕು. ಇದರಿಂದ ಪ್ರೌಢಶಿಕ್ಷಣಕ್ಕಾಗಿ ತನ್ನಲ್ಲಿಗೆ ಬಂದ ವಿದ್ಯಾರ್ಥಿ ಗಳನ್ನು ಮಾತ್ರವಲ್ಲದೆ, ಹೊರಗೇ ಉಳಿಯುವ ಅವರ ತಂದೆತಾಯಿಗಳು, ಪೋಷಕರು ಮತ್ತು ಇತರ ಜನಸಮುದಾಯವನ್ನು ವಿಶ್ವವಿದ್ಯಾನಿಲಯವು ಸುಶಿಕ್ಷಿತರನ್ನಾಗಿ ಮಾಡಿದಂತಾಗುವುದು. ಮಾರ್ಲೆಯೇ ತನ್ನ ಪ್ರಬಂಧದ ಬೇರೊಂದು ಕಡೆ ಹೇಳುವಂತೆ ಈ ಯಾವ ಸಮಾಜದಲ್ಲಿ ಬಹು ಜನರ ನೆಮ್ಮದಿ, ಆಸಕ್ತಿ, ಕುತೂಹಲ, ಸಾಮರ್ಥ್ಯ ಇವೆಲ್ಲವೂ ಅತ್ಯುನ್ನತ ವಾಗಿರುವುವೋ ಅಲ್ಲಿ ಮಾತ್ರ ಪ್ರತಿಭಾವಂತರ ನೈತಿಕ ಅಥವಾ ಬೌದ್ಧಿಕ ಶಕ್ತಿಗಳು ಅತ್ಯಂತ ಹೆಚ್ಚಿನ ಮಟ್ಟದಲ್ಲಿರಲು ಸಾಧ್ಯವಾಗುವುದು ಎನ್ನುವ ವಿಚಾರವನ್ನು ಕೃತಿಯು ತಿಳಿಸುತ್ತದೆ.

About the Author

ಹೊ. ಶ್ರೀನಿವಾಸಯ್ಯ
(04 January 1925)

ಹಿರಿಯ ಗಾಂಧಿವಾದಿ ಡಾ. ಹೊ. ಶ್ರೀನಿವಾಸಯ್ಯ  ಅವರು ಮಂಡ್ಯ ಜಿಲ್ಲೆಯ ಚೌದರೀಕೊಪ್ಪಲಿನವರು.  ತಂದೆ ಹೊನ್ನಪ್ಪ. ತಾಯಿ ತಿಮ್ಮಮ್ಮ. ಹೈಸ್ಕೂಲಿನಲ್ಲಿದ್ದಾಗಲೇ ಶಾಲೆಯಿಂದ ಹೊರಡಿಸುತ್ತಿದ್ದ ‘ವನಸುಮ’ ಎಂಬ ಪತ್ರಿಕೆಗೆ ಭಗವದ್ಗೀತೆಯ ತಾತ್ಪರ್ಯ, ಗೀತೆಯ ಸಂದೇಶದ ವಿಚಾರವಾಗಿ ಲೇಖನ ಮತ್ತು ಗೀತೋಪದೇಶದ ಚಿತ್ರಗಳನ್ನು ಬರೆಯುತ್ತಿದ್ದರು. ಭಾರತ್‌ ಅರ್ಥ್‌ ಮೂವರ್‍ಸ್‌‌ (ಲಿ) ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಅವರು  ಸದ್ಯ ನಿವೃತ್ತರು.  ಪ್ರಕೃತಿ ಜೀವನ ಕೇಂದ್ರದ ಸ್ಥಾಪಕರಾಗಿರುವ ಅವರು ಗಾಂಧಿ ಸಾಹಿತ್ಯ ಸಂಘ ಮತ್ತು ಸಿದ್ದವನಹಳ್ಳಿ ಕೃಷ್ಣರರ್ದ ಸ್ಮಾರಕ ಸಮಿತಿಗಳ ನಿಕಟ ಸಂಪರ್ಕದಲ್ಲಿದ್ದವರು. ಎಂಜಿನಿಯರ್‌ ಆಗಿದ್ದ ಅವರು ರಚಿಸಿದ ‘ನಾ ಕಂಡ ಜರ್ಮನಿ' ಪ್ರವಾಸ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ. ಪ್ರಕೃತಿ ...

READ MORE

Related Books