`ಮೌಢ್ಯ ಮತ್ತು ವೈಚಾರಿಕತೆ’ ಕೃತಿಯು ಎ.ಎಸ್. ನಟರಾಜ್ ಅವರ ಏಳು ಕೃತಿಗಳ ಸಂಕಲನವಾಗಿದೆ. ಇಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ, ಅದೇಕೆ ದೇಶದಲ್ಲಿ ಅಭಾವ? ದೈವ ಮತ್ತು ಮೌಢ್ಯ ಹಾಗು ದೈವ ನಿರಪೇಕ್ಷತೆಗೆ 200 ಕಾರಣಗಳು, ಫಲ ಜ್ಯೋತಿಷ್ಯ ಅವೈಜ್ಞಾನಿಕ-ಜ್ಯೋತಿಷಕ್ಕೆ ಕೋಟಿ ರೂ. ಸವಾಲು, ವಾಸ್ತು ಅವಾಸ್ತವ, ಅತಾರ್ಕಿಕ-ವಾಸ್ತು ಭೂತಕ್ಕೆ 10ಲಕ್ಷ್ಮ ರೂ. ಸವಾಲು, ಆತ್ಮ, ದೈವ, ಭೂತ, ಪ್ರೇತಗಳು ಇವೆಯೆ? ಮೈಮೇಲೆ ಬರುವುದೆ?, ಮತಧರ್ಮ ಹಾಗು ರಾಜಕಾರಣ-ಪರಸ್ಪರ ಪೂರಕವೇ? ಮಾರಕವೆ?, ಮಹಿಳೆ, ಮೌಢ್ಯ, ಶೋಷಣೆ ಮತ್ತು ವೈಚಾರಿಕತೆಯ ಕುರಿತ ಲೇಖನಗಳನ್ನು ಕಾಣಬಹುದು. ನಮ್ಮ ಸುತ್ತ ನಾವೇ ಕಲ್ಪಿಸಿಕೊಂಡ ಭ್ರಮೆಗಳಿಂದಲೂ ಬಾಲ್ಯದಲ್ಲಿ ನಮ್ಮಲ್ಲುಂಟುಮಾಡಿದ ವಿಶೇಷ ನಂಬಿಕೆಗಳ ಭಯದಿಂದಲೂ ನಾವಿಂದು ಮೌಲ್ಯಗಳಿಂದ ಹೊರಬರಲಾಗುತ್ತಿಲ್ಲ. ದೇವರು-ದೆವ್ವ, ಗ್ರಹಗತಿ, ವಾಸ್ತುದೋಷ, ಪವಾಡಗಳು, ಭೂತಗಳು ಮುಂತಾದ ತಪ್ಪು ಕಲ್ಪನೆಗಳನ್ನು ಹೇರಿ ನಮ್ಮನ್ನು ನಂಬುವಂತೆ ಮಾಡಿ ಅದಕ್ಕೆ ಪರಿಹಾರವಿದೆಯೆಂದು ಬೊಗಳೆ ಬಿಡುತ್ತಾ ನಮ್ಮ ಹಣವನ್ನೂ ಸಮಯವನ್ನೂ ಕಸಿದುಕೊಂಡು ನಮ್ಮಲ್ಲಿರುವ ನೆಮ್ಮದಿಯನ್ನು ಹಾಳುಮಾಡುತ್ತಾರೆ. ಜನರ ಮೌಡ್ಯವನ್ನು ಚೆನ್ನಾಗಿ ಉಪಯೋಗಿಸಿಕೊಂಡು ತಾವು ಧನಿಕರಾಗಲು ಯತ್ನಿಸುವ ವರ್ಗದ ಹಿತಾಸಕ್ತಿ ಇದರಲ್ಲಡಗಿದೆ.
ಲೇಖಕ ನಟರಾಜ್. ಎಸ್ ಅವರು ಮೂಲತಃ ಹಾಸನ ಜಿಲ್ಲೆಯ ಬೇಲೂರಿನವರು. ಎಂ.ಎ(ಇಂಗ್ಲಿಷ್) ಮತ್ತು ಬಿ.ಎಡ್ ಪದವೀಧರರಾಗಿರುವ ಅವರು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರಾಂಕ್ ಮತ್ತು ಚಿನ್ನದ ಪದಕ ವಿಜೇತರು. ಸಾಹಿತ್ಯ, ಕಲೆ, ವಿಜ್ಞಾನ ಅವರ ಆಸಕ್ತಿಕರ ವಿಚಾರವಾಗಿದ್ದು ಕತೆ, ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಮತ್ತು ಇಂಗ್ಲಿಷ್ ಅನುವಾದ ಕಾರ್ಯದಲ್ಲೂ ತೊಡಗಿಸಿಕೊಂಡಿರುವ ಅವರ ಕೆಲವು ಕವಿತೆಗಳು, ಕತೆಗಳು, ಬರಹಗಳು ವಿವಿಧ ಪತ್ರಿಕೆಗಳು ಹಾಗು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ...
READ MORE(ಹೊಸತು, ಫೆಬ್ರವರಿ 2012, ಪುಸ್ತಕದ ಪರಿಚಯ)
ನಮ್ಮ ದೇಶದಲ್ಲಿ ಅದೇಕೆ ವೈಜ್ಞಾನಿಕ ತಿಳುವಳಿಕೆ ಮೂಡುತ್ತಿಲ್ಲ? ನಮ್ಮ ಮನಸ್ಸೇ ಅದಕ್ಕೆ ಸಿದ್ಧವಿಲ್ಲವೇ ಅಥವಾ ನಮ್ಮನ್ನು ಯಾರಾದರೂ ನಿಯಂತ್ರಿಸುತ್ತಾರೆಯೇ ? ಅದು ಏನಾದರಾಗಲಿ, ನಾವೀಗ ವೈಧಾನಿಕ ಮನೋಭಾವವನ್ನು ಅವಶ್ಯವಾಗಿ ಹೆಚ್ಚಿಸಿಕೊಳ್ಳಬೇಕೆಂದು ಈ ಪುಸ್ತಕವು ಒತ್ತಾಯಿಸುತ್ತಿದೆ. ನಮ್ಮ ಸುತ್ತ ನಾವೇ ಕಲ್ಪಿಸಿಕೊಂಡ ಭ್ರಮೆಗಳಿಂದಲೂ ಬಾಲ್ಯದಲ್ಲಿ ನಮ್ಮಲ್ಲುಂಟುಮಾಡಿದ ವಿಶೇಷ ನಂಬಿಕೆಗಳ ಭಯದಿಂದಲೂ ನಾವಿಂದು ಮೌಲ್ಯಗಳಿಂದ ಹೊರಬರಲಾಗುತ್ತಿಲ್ಲ. ದೇವರು-ದೆವ್ವ, ಗ್ರಹಗತಿ, ವಾಸ್ತುದೋಷ, ಪವಾಡಗಳು, ಭೂತಗಳು ಮುಂತಾದ ತಪ್ಪು ಕಲ್ಪನೆಗಳನ್ನು ಹೇರಿ ನಮ್ಮನ್ನು ನಂಬುವಂತೆ ಮಾಡಿ ಅದಕ್ಕೆ ಪರಿಹಾರವಿದೆಯೆಂದು ಬೊಗಳೆ ಬಿಡುತ್ತಾ ನಮ್ಮ ಹಣವನ್ನೂ ಸಮಯವನ್ನೂ ಕಸಿದುಕೊಂಡು ನಮ್ಮಲ್ಲಿರುವ ನೆಮ್ಮದಿಯನ್ನು ಹಾಳುಮಾಡುತ್ತಾರೆ. ಜನರ ಮೌಡ್ಯವನ್ನು ಚೆನ್ನಾಗಿ ಉಪಯೋಗಿಸಿಕೊಂಡು ತಾವು ಧನಿಕರಾಗಲು ಯತ್ನಿಸುವ ವರ್ಗದ ಹಿತಾಸಕ್ತಿ ಇದರಲ್ಲಡಗಿದೆ. ಯಾರು ಏನೇ ಹೇಳಿದರೂ ನಮ್ಮ ಸ್ವಂತ ಬುದ್ಧಿಯನ್ನು ಸರಿಯಾದ ಸಮಯದಲ್ಲಿ ಉಪಯೋಗಿಸಿದಲ್ಲಿ ಯಾವುದೇ ಮೂಢನಂಬಿಕೆಗಳಿಗೆ ನಾವು ಬಲಿಯಾಗಲು ಸಾಧ್ಯವಿಲ್ಲವೆಂದು ಈ ಪುಸ್ತಕ ಸಾರಿ ಹೇಳುತ್ತಿದೆ. ರಾಜ್ ವೈಚಾರಿಕ ವೇದಿಕೆ ಸತತವಾಗಿ ವಿಚಾರವಾದವನ್ನು ಜನರಲ್ಲಿ ಮೂಡಿಸಲು ಶ್ರಮಿಸುವ ಸಂಸ್ಥೆ ಒಟ್ಟು ಏಳು ಕೃತಿಗಳ ಸಂಕಲನವಾಗಿ ಈ ಕೃತಿ ರೂಪುಗೊಂಡಿದೆ.