ʼಅಡ್ಡಗೋಡೆಯ ಮೇಲಿನ ದೀಪʼ ಸಂಪಾದಿತ ಚಿಂತನಗಳಾಗಿದ್ದು ಸುಬ್ಬಣ್ಣ ಅಂಬೆಸಂಗೆ ರಚಿಸಿದ್ದಾರೆ. ಧಾರವಾಡ, ಹೊಸಪೇಟೆ, ಗುಲಬರ್ಗಾ, ರಾಯಚೂರು ಆಕಾಶವಾಣಿಗಳಲ್ಲಿ ಪ್ರಾಸಾರವಾಗುತ್ತಿದ್ದ ಚಿಂತನಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಕರ್ನಾಟಕಾದ್ಯಂತ ನೂರಾರು ಚಿಂತನಾಕಾರರು ಇದ್ದಾರೆ. ಅವರಲ್ಲಿ ಆಯ್ದ ಕೆಲವು ಚಿಂತನಗಳನ್ನು ಒಟ್ಟುಗೂಡಿಸಿ ಪುಸ್ತಕದ ರೂಪದಲ್ಲಿ ಇಲ್ಲಿ ಹೊರತರಲಾಗಿದೆ.ಅವರಲ್ಲಿ ಡಾ. ಶೈಲಜಾ ಉಡಚಣ, ಡಾ. ಬಸವರಾಜ ಸಬರದ, ಡಾ. ವಿ.ಜಿ. ಪಾಜಾರ್, ಎ. ಕೆ. ರಾಮೇಶ್ವರ, ಡಾ. ವಸಂತ ಕುಷ್ಟಗಿ, ಡಿ.ಎನ್. ಅಕ್ಕಿ, ಡಾ. ಸ್ವಾಮಿರಾವ್ ಕುಲಕರ್ಣಿ, ಡಾ. ಮಾಣಿಕರಾವ್ ಧನಾಶ್ರೀ, ಪ್ರೊ. ಬಾಲಚಂದ್ರ ಜಯಶೆಟ್ಟಿ, ಪ್ರೊ. ಬಿ. ಮಹಾದೇವಪ್ಪ, ಡಿ.ಎನ್. ಬಳೂರಗಿ, ಚಂದ್ರಕಾಂತ ಕರದಳ್ಳಿ, ಗುರುಮೂರ್ತಿ ಸಂಚಕೂರು, ಲಕ್ಷ್ಮೀದೇವಿ ಶಾಸ್ತ್ರಿ, ಡಾ. ಮಂದಾಕಿನಿ, ಎ.ವಿ.ಎಸ್. ಶಾಂತನವರ, ಸುಮನ್ ಯಜುರ್ವೇದಿ ಮುಂತಾದವರು ಕೃತಿ ಪ್ರಕಟಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ ಚಿಂತನ ಸಾಹಿತ್ಯ ಇತ್ತೀಚೆಗೆ ಹೆಚ್ಚು ಕಂಡು ಬರುತ್ತಿದೆ. ಡಾ.ಜಿ.ಬಿ. ವಿಸಾಜಿ, ಎಂ.ಜಿ. ದೇಶಪಾಂಡೆ, ಎಂ.ಜಿ. ಗಂಗನಪಳ್ಳಿ, ಶಂಭುಲಿಂಗ ಕಾಮಣ್ಣ, ಚಂದ್ರಪ್ಪ ಹೆಬ್ಬಾಳಕರ್, ಕೆಲವರು ಮಾತ್ರ ಪುಸ್ತಕ ಹೊರತಂದಿದ್ದಾರೆ. ದೇಶಾಂಶ ಹುಡುಗಿ, ವೀರೇಂದ್ರ ಸಿಂಪಿ, ಡಾ. ಗವಿಸಿದ್ದಪ್ಪ ಪಾಟೀಲ, ಗಂಗಾಂಬಿಕಾ ಪಾಟೀಲ, ಪ್ರೇಮಾ ಸಿರ್ಸೆ, ಸೋಮನಾಥ ಮಾಳವಾಡ, ಬಿಎಸ್. ಖೂಬಾ, ಎಚ್. ಕಾಶೀನಾಥರೆಡ್ಡಿ, ಸೂಗಯ್ಯ ಹಿರೇಮಠ, ಜಯದೇವಿ ಗಾಯಕವಾಡ, ಇನ್ನೂ ಹಲವರು ಆಕಾಶವಾಣಿಗಳ ಚಿಂತನ ಬರೆದು ಪ್ರಸಾರವಾಗಿವೆ. ಇವರ ಮಧ್ಯದಲ್ಲಿ ಹಿರಿಯ ಸಾಹಿತಿ, ಕಥೆ-ಕಾದಂಬರಿಕಾರ ಸುಬ್ಬಣ್ಣ ಅಂಬೆಸಂಗೆ ಈ ಹಿಂದೆ ಒಂದು ಚಿಂತನ ಪುಸ್ತಕ ಪ್ರಕಟಿಸಿ ಈಗ ಎರಡನೆಯ ಸಂಕಲನ 'ಅಡ್ಡಗೋಡೆಯ ಮೇಲಿನ ದೀಪ ಹೊರಬಂದಿದೆ.
ಲೇಖಕ ಸುಬ್ಬಣ್ಣ ಅಂಬೆಸಂಗೆ ಅವರು (ಜನನ: 1950 ಜೂನ್ 15) ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಎಕಲಾಸಪೂರದವರು. ಉಪನ್ಯಾಸಕರಾಗಿ ಸವಯಂ ನಿವೃತ್ತಿ ಪಡೆದರು. 1973ರಲ್ಲಿ ರಚಿಸಿದ ಸ್ತ್ರೀ ಕೇಂದ್ರಿತ 'ಸಿಂದಿ ಬನದಲ್ಲಿ ಸಿಕ್ಕವಳು' ಕಾದಂಬರಿಯು ಬೀದರ ಜಿಲ್ಲೆಯ ಮೊದಲ ಕಾದಂಬರಿ ಎಂದೇ ಹೇಳಲಾಗುತ್ತದೆ. ಅರಳು, ಚೇತನ, ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತು, ಬಳ್ಳಿಯ ಹೂ ಬಾಡದಿರಲಿ-ಇವು ಅವರ ಪ್ರಮುಖ ಕತಾ ಸಂಕಲನಗಳು. ‘ಬೀದರ ಜಿಲ್ಲೆಯ ಕನ್ನಡ ಭಾಷಾ ಕುಸುಮ, ಗುರುತು, ಕಲ್ಯಾಣ ಕರ್ನಾಟಕದ ಕನ್ನಡ ಭಾಷೆ ಮತ್ತು ಇತರ ಪ್ರಬಂಧಗಳು (ಪ್ರಬಂಧ ಸಂಕಲನಗಳು), ಅಡ್ಡಗೊಡೆಯ ಮೇಲಿನ ದೀಪ, ...
READ MORE