ಲೇಖಕ ರಾಧಾಕೃಷ್ಣ ಭಡ್ತಿ ಅವರ ಕೃತಿ ʻಪಾರಂಜವ್ಯʼ. ನೀರು ಹಾಗೂ ನೀರಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿರಂತರವಾಗಿ ಬರೆಯುತ್ತಿರುವ ಇವರ ಈ ಕೃತಿಯೂ ನೀರಿನ ಕುರಿತಾಗಿದೆ. ಇಲ್ಲಿ ಪಾರಂಪರಿಕ ಜಲಸಂರಕ್ಷಣೆ ವ್ಯವಸ್ಥೆ, ಸುಸ್ಥಿರ ಬದುಕಿಗೆ ಸುಂದರ ಮಾದರಿ ಎಂದು ಹೇಳಿದ್ದಾರೆ. ಜಲ ವ್ಯವಸ್ಥೆಗೆ ಭಾರತದಲ್ಲಿ ಹಲವಾರು ತಂತ್ರಜ್ಞಾನಗಳನ್ನು ಉಪಯೋಗಿಸಲಾಗುತ್ತಿದೆ. ಆದರೂ ಎಲ್ಲೂ ನೀರಿಗೆ ಹಾಹಾಕಾರ ಮಾತ್ರ ಕಡಿಮೆಯಾಗಿಲ್ಲ. ಬೇಸಿಗೆ ಕಾಲ ಬರುವಾಗ ಈ ಸಮಸ್ಯೆಗಳು ಮತ್ತಷ್ಟು ತಲೆಎತ್ತಿ ನಿಲ್ಲುತ್ತಿರುವುದು ಶೋಚನೀಯ ಅವಸ್ಥೆಯಾಗಿದೆ. ಹಾಗಾಗಿ ಗ್ರಾಮ ಪ್ರದೇಶಗಳಲ್ಲಿ ಇಂದಿಗೂ ಯಾವುದೇ ನಿರ್ಧಾರಗಳಾದರೂ ಅದು ನೀರಿನ ಮೂಲವನ್ನೇ ಅವಲಂಬಿಸಿರುತ್ತವೆ. ಇಂಥ ಎಲ್ಲ ವಿಶೇಷಗಲ ಬಗ್ಗೆ ಲೇಖಕರು ಈ ಪುಸ್ತಕದಲ್ಲಿ ಹೇಳಿದ್ದಾರೆ.
ಪತ್ರಕರ್ತ- ಅಂಕಣಕಾರ ರಾಧಾಕೃಷ್ಣ ಎಸ್. ಭಡ್ತಿ ಅವರು ನೀರು ಮತ್ತು ನೀರಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವಿರತವಾಗಿ ಬರೆಯುತ್ತಿರುವ ಲೇಖಕ. ಅವರ ಬಹುತೇಕ ಬರೆಹಗಳು ನೀರಿಗೆ ಸಂಬಂಧಿಸಿದವುಗಳಾಗಿರುವುದು ವಿಶೇಷ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ನೀರಿನ ಮಹತ್ವ, ನೀರು ಸಂಗ್ರಹದ ಪಾರಂಪರಿಕ ವಿಧಾನಗಳನ್ನು ಅಂಕಣಗಳನ್ನು ಬರೆದು ಪ್ರಕಟಿಸಿರುವ ಭಡ್ತಿ ಅವರು ಸದ್ಯ ’ಹಸಿರುವಾಸಿ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. ನೀರನ್ನು ಕುರಿತ ಅವರ ಹಲವು ಪುಸ್ತಕಗಳು ಪ್ರಕಟವಾಗಿವೆ. ...
READ MORE