ಜಗದಗಲ ಮುಗಿಲಗಲ

Author : ಕಾಶೀನಾಥ ಅಂಬಲಗೆ

Pages 180

₹ 120.00




Year of Publication: 2015
Published by: ಬಸವ ಪ್ರಕಾಶನ
Address: ಮುಖ್ಯಬೀದಿ, ಕಲಬುರಗಿ - 585 101
Phone: 9449825431

Synopsys

‘ಜಗದಗಲ ಮುಗಿಲಗಲ’ ಲೇಖಕ ಕಾಶೀನಾಥ ಅಂಬಲಗಿ ಅವರ ಲೇಖನಗಳ ಸಂಕಲನ. ಶರಣರು ಮತ್ತು ನಂತರ ಕಾವ್ಯ ಹೀಗೆ ಅವರ ವಿವಿಧ ಸಾಮಾಜಿಕ ಆಯಾಮಗಳನ್ನು ಕುರಿತಂತೆ ಅಂಬಲಗೆ ಅವರ ಚಿಂತನೆ ಮುಂದುವರೆದಿದೆ. ಇವರ ಹಿಂದಿ ಪುಸ್ತಕಗಳಲ್ಲಿ ಬಸವೇಶ್ವರರು ಮತ್ತು ಕಬೀರ ದಾಸರನ್ನು, ಅಕ್ಕಮಹಾದೇವಿ ಮತ್ತು ಮೀರಾಬಾಯಿಯನ್ನು ಹೋಲಿಸಿ ನೋಡಲಾಗಿದೆ. ಬಸವಣ್ಣ ಮತ್ತು ಕಬೀರರ ಬಗ್ಗೆ ಲೇಖಕರು ದಣಿವಿಲ್ಲದೆ ಬರೆದಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ, ವಿಶೇಷವಾಗಿ ವಚನ ಸಾಹಿತ್ಯಕ್ಕೆ ಅಂಬಲಗೆ ನೀಡಿರುವ ಕೊಡುಗೆ ಅಪಾರ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books