’ಬಾಣಕಾದಂಬರಿ’ ಎಂಬ ಕೃತಿಯು ಗಂಗಾಧರ ಮಡಿವಾಳೇಶ್ವರ ತುರಮುರಿ ಅವರ ಸಂಪಾದಿತ ಬರವಣಿಗೆಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ದೊಡ್ಡ ಮನಸ್ಸಿನ ಸ್ತ್ರೀಪುರುಷರು ತಮ್ಮ ಮಿತ್ರರಿಗೆ ಸಂಕಟ ಬಂದಾಗ, ತಾವು ಅವರ ಸಲುವಾಗಿ ಎಷ್ಟು ಕಷ್ಟಪಡುತ್ತಾರೆ, ಅವರಿಗೆ ಕಲ್ಯಾಣವಾಗುವ ಬಗ್ಗೆ ಎಷ್ಟು ಸಾಹಸ ಮಾಡುತ್ತಾರೆ, ಹಾಗೂ ಒಬ್ಬರ ಮೇಲೊಬ್ಬರು ಎಷ್ಟು ಪ್ರೀತಿ ಮಾಡುತ್ತಾರೆ ಎಂಬ ವಿಷಯದಲ್ಲಿಯೂ, ಪಾಪ ವಾಸನೆಯಿಂದ ಕೆಟ್ಟ ಪರಿಣಾಮವಾಗದೆ ಇರುವದಿಲ್ಲೆಂಬ ವಿಷಯದಲ್ಲಿಯೂ, ಆ ಪಾಪ ಪರಿಹಾರವಾಗುವದಕ್ಕೆ ದೇವರ ಧ್ಯಾನವೇ ಮುಖ್ಯವೆಂಬ ವಿಷಯವನ್ನು ಈ ಕೃತಿಯು ತಿಳಿಸುತ್ತದೆ.
ಕನ್ನಡ ಕೈಂಕರ್ಯಕ್ಕೆ ಸದಾ ಸಿದ್ಧ ಎನ್ನುವಂತೆ ಬದುಕಿನುದ್ದಕ್ಕೂ ಸಾಗಿದವರು ಗಂಗಾಧರ ಮಡಿವಾಳೇಶ್ವರ ತುರಮರಿಯವರು. 1827ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜನಿಸಿದರು. ಆ ಕಾಲಾವಧಿಯಲ್ಲಿ ಮರಾಠಿ ಭಾಷೆಯ ಪ್ರಾಬಲ್ಯವಿದ್ದರೂ ಸಹ, ತಾಯಿನುಡಿಯ ಅಭಿಮಾನಿಯಾದ ಬಾಲಕ ಗಂಗಾಧರ ಅವರು ಕನ್ನಡವನ್ನೆ ಕಲಿಯಲು ಅಪೇಕ್ಷಿಸಿದ್ದರಿಂದ, ಅವರ ಮಹತ್ವಾಕಾಂಕ್ಷೆಯನ್ನು ಕಂಡು ಸಂತೋಷಗೊಂಡ ಗುರು ಮಡಿವಾಳೇಶ್ವರರು ಅವರಿಗೆ ಹಳಗನ್ನಡ ಹಾಗು ಸಂಸ್ಕೃತ ಕಾವ್ಯಗಳ ಅಭ್ಯಾಸ ಮಾಡಿಸಿದರು. ಗುರುಗಳ ನಿಧನದ ನಂತರ ತುರಮರಿಯವರು ತಮ್ಮ ಹೆಸರಿನ ಮುಂದೆ ಅವರ ಹೆಸರನ್ನೂ ಸಹ ಜೋಡಿಸಿಕೊಂಡು ಗಂಗಾಧರ ಮಡಿವಾಳೇಶ್ವರ ತುರಮರಿಯಾದರು. ಧಾರವಾಡ ವಿಭಾಗದ ಜಿಲ್ಲಾಧಿಕಾರಿ 'ಎಲಿಯಟ್' ಮುಂಬಯಿ ಪ್ರಾಂತದ ...
READ MORE