ಅರಿವಿನ ಜಾಡು

Author : ದಾವಲಸಾಬ ನರಗುಂದ

Pages 110

₹ 110.00




Year of Publication: 2022
Published by: ಬೆರಗು ಪ್ರಕಾಶನ
Address: ಅಲಮೇಲ ತಾಲೂಕು, ವಿಜಯಪುರ ಜಿಲ್ಲೆ

Synopsys

"ಅರಿವಿನ ಜಾಡು' ಎಂಬ ಲೇಖನಗಳ ಸಂಚಯ ಕೃತಿಯ ಮುಖೇನ ಎ೦ದಿಗಿಂತ ವರ್ತಮಾನದ ಸಮಾಜಕ್ಕೆ ಅಗತ್ಯವೆಂದೆಣಿಸಿ, ಹೆಚ್ಚ ನಮ್ಮ 'ಅನುಭಾವ' ಹೇಳಿಕೊಡುವ 'ಅರಿವು' ಎಂಬ ಜೀವನದ ನಿಜ ಅಸ್ತಿತ್ವ-ಅನುಭೂತಿ ಶಕ್ತಿಯ ಅರಿವನ್ನು ಅರಿವಾಗಿಸಲು ಪ್ರಯತ್ನಿಸಿದ್ದಾರೆ. ಮುಳಗುಂದ ಪರಿಸರದ ಕಾಲಭೈರವ ಪರಂಪರೆಯ ದರ್ಶನದೊಂದಿಗೆ ದೇವಾಲಯಗಳ ಜೀರ್ಣೋದ್ದಾರ, ನಿರ್ವಹಣೆಯ ಕುರಿತು ಯುವ ಬರಹಗಾರನ ಕಾಳಜಿ ಇಲ್ಲಿ ವ್ಯಕ್ತವಾಗಿದೆ. ಆಧುನಿಕ ಸಾಹಿತ್ಯದಲ್ಲೊಂದು ಸುತ್ತು ಹೊಡೆಸಿ, ಆಯಾ ಕಾಲಘಟ್ಟದ ಸಾಹಿತ್ಯ ಕಲಿಸಿಕೊಟ್ಟ ಮೌಲ್ಯಗಳ ಅರಿಯುವಿಕೆ ನಿಲ್ಲಬಾರದೆಂಬುದು ಯುವಮನಸ್ಸಿನ ಆಶಯವಾಗಿದೆ. ಕರ್ನಾಟಕ ಏಕೀಕರಣದ ದನಿ ಆಲೂರರ ಸೇವೆಯನ್ನು ಮರೆಯಬೇಡಿರೆಂದು ಕನ್ನಡ ಮನಸ್ಸುಗಳ ಎಚ್ಚರಿಸುವ ಹಂಬಲ ದಾವಲಸಾಬ ಅವರದು. ಕೊನೆಯಲ್ಲಿ 'ಮೀ ರಕ್ಷಂ' ಚಿತ್ರವೊಂದರ 'ಕಲೆ ಯಾವ ಧರ್ಮ, ಜಾತಿಯ ಸೊತ್ತಲ್ಲ; ಅದು ಕಲಿಯುವವನ, ಕಲಿತವನ ಸೊತ್ತು' ಎಂಬ ಸಂದೇಶವನ್ನಿಟ್ಟುಕೊಂಡು ಸಮಾಜದ ಕೋಮುವಾದಿತ್ವ, ಅವಕಾಶವಾದಿತ್ವ, ಮೂಲಭೂತವಾದಿತ್ವ ಶಕ್ತಿಗಳ ವಿರುದ್ಧ ಲೇಖಕರ ಮೃದುವಾದ ಪ್ರತಿಭಟನೆಯಿದೆ. ಹೀಗೆ ಸಮುದಾಯ ಸಾಮರಸ್ಯ, ಭಾವೈಕ್ಯತೆ, ದೇಶದ ಬಹುತ್ವದ ಬಗೆಗಿರುವ ಕಾಳಜಿ ಒಂದೆಡೆಯಾದರೆ, ಇವುಗಳ ಯಶಸ್ಸಿಗೆ ಭಂಗ ತರುವ ಕಾಣದ ಕೈಗಳ ಆತಂಕವೂ ಲೇಖಕರಿಗಿದೆ.

About the Author

ದಾವಲಸಾಬ ನರಗುಂದ

ಲೇಖಕ ದಾವಲಸಾಬ ನರಗುಂದ ಮೂಲತಃ ಗದಗ ಜಿಲ್ಲೆಯ ನರಗುಂದದವರು. ತತ್ವಪದಗಳ ರಚನೆ ಇವರ ಹವ್ಯಾಸ.  ಕೃತಿಗಳು: ತೂಗುತಿದೆ ನಿಜ ಬಯಲಲಿ  ...

READ MORE

Related Books