ರಷ್ಯಾದ ಮಹಾನ್ ಸಾಹಿತಿ ಕಾದಂಬರಿಕಾರ ಮ್ಯಾಕ್ಸಿಂ ಗಾರ್ಕಿ ಅವರ ಸ್ಮರಣೆ ಹಿನ್ನೆಲೆಯಲ್ಲಿ ಸಾಹಿತಿ ಅ.ನ.ಕೃಷ್ಣರಾಯರು ಮ್ಯಾಕ್ಸಿಂ ಗಾರ್ಕಿ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮ್ಯಾಕ್ಸಿಂ ಗಾರ್ಕಿ ಜೀವನ, ಸಾಹಿತ್ಯ ಕುರಿತು ದರ್ಶನ ನೀಡುತ್ತದೆ.
ನಾಡಿನ ವಿವಿಧ ಲೇಖಕರಿಂದ ಗಾರ್ಕಿ ಕುರಿತಂತೆ ವಿವಿಧ ಮಗ್ಗಲುಗಳನ್ನು ವಿಶ್ಲೇಷಿಸುವ ಕೆಲಸ ಇಲ್ಲಿ ಕಾಣಬಹುದು. ಕೃತಿಯಲ್ಲಿ ಆಧುನಿಕ ರಷ್ಯಾ ಸಾಹಿತ್ಯ (ಮಾ.ನಾ. ಚೌಡಪ್ಪ), ಮ್ಯಾಕ್ಸಿಂ ಗಾರ್ಕಿ (ಅ.ನ.ಕೃ), ಮಿಂಚು ಹನಿ (ಗಾರ್ಕಿಯ ದಿನಚರಿಯಿಂದ ಅನುವಾದಕ; ತರಾಸು), ಲೆನಿನ್ ನೊಂದಿಗಿನ ಕೆಲವು ದಿನಗಳು (ಗಾರ್ಕಿಯ ಲೇಖನ ಅನುವಾದ: ಎಸ್. ಅನಂತ ನಾರಾಯಣ), ಖಾನನೂ ಅವನ ಮಗನೂ (ಜಿ.ಪಿ.ರಾಜರತ್ನಂ), ಗಾರ್ಕಿ ಜೀವನದ ಮೈಲುಗಲ್ಲುಗಳು (ಸಂಪಾದಕ) ಹೀಗೆ ಒಟ್ಟು 17 ಅಧ್ಯಾಯಗಳಡಿ ಗಾರ್ಕಿಯ ಬದುಕು-ಬರೆಹದ ಸಮಗ್ರ ಪರಿಚಯವನ್ನು ಮಾಡಿಕೊಡುವ ಕೃತಿ ಇದು.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE