ಹಾಸ್ಯಬಂಧ

Author : ಕೆ.ಎನ್.ಮಹಾಬಲ

Pages 102

₹ 80.00




Year of Publication: 2016
Published by: ಪ್ರಗತಿಪರ ಪ್ರಕಾಶನ
Address: ಗ್ರಾಮಂತರ ಬುದ್ವಿ ಗಳ ಬಳಗ ಅರ್ಕೇಶ್ವರ ನಗರ , ಕೆ.ಆರ್.ನಗರ, ಮೈಸೂರು ಜಿಲ್ಲೆ -571602
Phone: 9449680583

Synopsys

‘ಹಾಸ್ಯಬಂಧ’ ಕೆ. ಎನ್‌ ಮಹಾಬಲ ಅವರ ಲೇಖನಗಳ ಸಂಗ್ರಹವಾಗಿದೆ. ಲಘುಹಾಸ್ಯ ಲೇಖಕ. ಇವರ ಎಲ್ಲ ರ ಬಂಧಗಳೂ ಮೇಲ್ನೋಟಕ್ಕೆ ಲಘುವಾಗಿ ಕಂಡರೂ, ನಿಜವಾಗಿ ಇವು ಮನುಷ್ಯ ಸ್ವಭಾವಕ್ಕೆ ವರ್ತಣೆಗೆ ಬಂದ ಕ್ಷಕಿರಣಗಳಾದ ಕಲ್ಲ ಪಬಂಧಗಳು ಚಿಕ್ಕ ಚೊಕ್ಕ ವಾಕ್ಯಗಳಿಂದ ಕೂಡಿದ್ದು, ಓದಿದಾಗ ಮುದ ನೀಡುತ್ತವೆ. ಒಳಷ್ಟು ಪಬಂಧಗಳು ಸಣ್ಣ ಕಥೆಗಳಾಗುತ್ತವೆ. ಅನ್ನುವ ಮಾತುಂಟು, ಇನ್ನೂ ಕೆಲವು ಅಂತಹ ಬಂಧಗಳು ಇವೆಯಾದರೂ ಸಣ್ಣಕಥೆಗಳಲ್ಲಿರಬೇಕಾದ ನಾಟಕೀಯತೆ, ಅನಿರೀಕ್ಷಿತ ತಿರುವುಗಳು ಇಲ್ಲದಿರುವುದರಿಂದ ಅವನ್ನೂ ಪ್ರಬಂಧಗಳೆಂದು ಪರಿಗಣಿಸಬಹುದು, ಇಲ್ಲಿನ ಪ್ರಬಂಧಗಳ ವಸ್ತು ವೈವಿಧ್ಯತೆ ಅವಕ್ಕೆ ಇವರು ಬಳಿಯುವ ವಾಚೋವರ್ಣ ವೈವಿಧ್ಯತೆ ಗಮನ ಸೆಳೆಯುತ್ತದೆ. ಬೇವಿನಸೊಪ್ಪಿನಿಂದ ಹಿಡಿದು, ಕಾರು, ಗುಂಡುಪ್ರಿಯ ಕಂದ, ಬ್ಯಾಂಕಿನಲ್ಲಿ ಮಗಳು ಹೊಸ ನೌಕರಿಗೆ ಹೊರಟಾಗಿನ ಚಿಂತೆ, ಸಮಾರಂಭಗಳಲ್ಲಿನ ಮುಖ್ಯ ಅತಿಥಿಯ ಡಿಷುಂ ಡಿಷುಂ' ಮಾರಾಮರಿ, ಮುಂಜಾವಿನ ಮಾನವೀಯ ಚಟುವಟಿಕೆಗಳ ಚಿತ್ರಣ, ಗುಬ್ಬಚ್ಚಿಯ ಅಪ್ಯಾಯಮಾನವಾದ ಜೀವನದಾಟ ಹೀಗೆ. ವಿಶೇಷವೆಂದರೆ ವಸ್ತು ಯಾವುದೇ ಇರಲಿ ಅದನ್ನು ಹಾಸ್ಯ ರಸದಲ್ಲಿ ಅದ್ದಿ ತೆಗೆದ ಈ ಪ್ರಬಂಧಗಳು ಇತರ ಪ್ರಬಂಧಗಳಿಗಿಂತ ತೀರ ವಿಭಿನ್ನವಾದ ವಿಡಂಬನಾತ್ಮಕ ಪ್ರಬಂಧ ಆಯೋಗಗಳು ನಡೆದುಬಂದ ದಾರಿ-ಪುಸ್ತಕ ವಿಮರ್ಶೆ', ಇದರ ತಾಂತ್ರಿಕತೆಯೂ ವಿಶಿಷ್ಟ, ಲಲಿತ ಪ್ರಬಂಧಗಳನ್ನ 'ಮಂದಕೃತಿಯ ಭಾವಗೀತೆಗಳು' ಎಂದಿದ್ದಾರೆ ಪ್ರೊ ತೀ.ನಂ.ಶ್ರೀಯವರು. ಲಲಿತ ಪ್ರಬಂಧಕಾರನ ಬರಹಗಳಲ್ಲಿ ಒಂದು ಬಗೆಯ ಸ್ನೇಹವಲಯ ಮತ್ತು ಆತ್ಮೀಯತೆ ಇರುತ್ತದೆ ಎನ್ನುತ್ತಾರೆ ತಿಳಿದವರು. ತನ್ನ ಸುತ್ತಲಿನ ಜನಜೀವನವನ್ನ, ವ್ಯಕ್ತಿಗಳನ್ನು, ಅವರ ವ್ಯವಹಾರ, ವರ್ತನೆಗಳನ್ನ ಕುತೂಹಲದಿಂದ, ಒಂದು ಬಗೆಯ ನಿರ್ಲಿಪ್ತತೆಯಾತ್ಮಕ ದೃಷ್ಟಿಯಿಂದ ನೋಡಿ, ಅದರ ಅನುಭವವನ್ನು ತನ್ನದಾಗಿಸಿಕೊಂಡು, ಅಕ್ಷರ ರೂಪಕ್ಕೆ ಇಳಿಸುವ ಕ್ಷಮತೆಯಿರುವ ಸಾಹಿತಿಗಷ್ಟೇ ಇಂತಹ ಸುಂದರ ಚಿತ್ರಣಗಳನ್ನು ಕೊಡಲು ಸಾಧ್ಯ. ಮಹಾಬಲರು ಇದರಲ್ಲಿ ತಮ್ಮ ಮಹಾಬಲತ್ವವನ್ನ ಚೆನ್ನಾಗಿ ತೋರಿದ್ದಾರೆ.

About the Author

ಕೆ.ಎನ್.ಮಹಾಬಲ
(09 August 1955)

ಕೆ ಎನ್ ಮಹಾಬಲ ಅವರು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹಲವಾರು ಸಾಹಿತ್ಯ ವಿಮರ್ಶೆ ಆಂಡಯ್ಯನ ಅಚ್ಚಗನ್ನಡ ನಿಷ್ಠೆ ,ಲಲಿತ ಪ್ರಬಂಧಗಳು , ಟಿ ಎಸ್ ವೆಂಕಣ್ಣಯ್ಯ ,ಬಿ ಜಿ ಎಲ್ ಸ್ವಾಮಿ,ಸು ರಂ ಎಕ್ಕುಂಡಿ ,ಮುಂತಾದ ಲೇಖನಗಳು ಮತ್ತು ಇನ್ನೂ ಹಲವಾರು ಹಾಸ್ಯ ವಿಡಂಬನೆಗಳು ಬ್ಯಾಂಕ್ ಕನ್ನಡ ಸಂಘದ ಸಾಹಿತ್ಯ ಸಂಚಿಕೆ "ಮಂದಾರ "ದಲ್ಲಿ ಪ್ರಕಟವಾಗಿದೆ. ಕೃತಿಗಳು: ‘ಇಂದೂ ಇದ್ದಾರೆ’ ಕವನ ಸಂಕಲನ ‘ಹಾಸ್ಯಬಂಧ ಹಾಸ್ಯಲೇಖನ ಸಂಗ್ರಹ’ ,‘ಬೊಗಸೆ ತುಂಬ ಹೂವು’ ...

READ MORE

Related Books